ಬೆಂಗಳೂರು, ಮಾ.28- ಯುಗಾದಿ (Ugadi) ಹಬ್ಬ ವರ್ಷದ ಮೊದಲ ಹಬ್ಬ.ಇದನ್ನು ಹಳೆ ಮೈಸೂರು ಪ್ರದೇಶದಲ್ಲಿ ಅತ್ಯಂತ ಅದ್ದೂರಿ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ. ಹಬ್ಬದ ಮರುದಿನ ಆಚರಿಸುವ ಹೊಸ ತೊಡಕು ಎಲ್ಲರ ಕೇಂದ್ರ ಬಿಂದು. ಮಾಂಸ ಪ್ರಿಯರು ಯುಗಾದಿಗಿಂತಲೂ ಹೊಸ ತೊಡಕನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಇದಕ್ಕಾಗಿ ತಿಂಗಳಗಳ ಮೊದಲೆ ತಯಾರಿ ಮಾಡುತ್ತಾರೆ.
ಈ ಅದ್ದೂರಿ ಹಬ್ಬಕ್ಕೆ ಖರ್ಚು ಕೂಡ ಅದ್ದೂರಿಯಾಗೇ ಇರುತ್ತದೆ.ಈ ಹಬ್ಬಕ್ಕೆ ಒಂದೇ ಬಾರಿ ಹಣ ಹೊಂದಿಸಲಾಗದವರು ಚೀಟಿ ಹಾಕಿಕೊಳ್ಳುವ ಪದ್ದತಿ ಕೂಡ ಹಲವೆಡೆ ಚಾಲ್ತಿಯಲ್ಲಿದೆ.
ಯಾರಾದರೂ ಒಬ್ಬ ವ್ಯಕ್ತಿ ಯುಗಾದಿ ಹಬ್ಬದ ಚೀಟಿ ಆರಂಭಿಸಿದರೆ, ಆಸಕ್ತರು ಇದರ ಸದಸ್ಯರಾಗಿ ಮಾಸಿಕ ವಂತಿಗೆ ನೀಡುತ್ತಾರೆ. ವರ್ಷ ಪೂರ್ತಿ ಇದು ನಡೆಯುತ್ತದೆ.ಹಬ್ಬದ ದಿನ ಸಮೀಪಿಸುತ್ತಿದ್ದಂತೆ ಚೀಟಿ ಕಟ್ಟಿಸಿಕೊಂಡ ವ್ಯಕ್ತಿ ಚಂದಾದಾರರಿಗೆ ಹಬ್ಬದ ಅಡುಗೆಗೆ ಬೇಕಾದ ದಿನಸಿ ಹಾಗೂ ಹಬ್ಬದ ಮರುದಿನ ಮಾಂಸ ನೀಡುತ್ತಾರೆ.
ಈ ರೀತಿಯಲ್ಲಿ ಯುಗಾದಿ ಹಬ್ಬದ ಚೀಟಿ ಹಾಕಿದ್ದ ಸಾವಿರಾರು ಮಂದಿಗೆ ಉಂಡೆನಾಮ ಹಾಕಿ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಮನೆ ಖಾಲಿ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬ್ಯಾಟರರಾಯನಪುರದಲ್ಲಿ ನಡೆದಿದೆ.
ಯುಗಾದಿ ಹಬ್ಬದ ಚೀಟಿ ಹಾಕಿಸಿಕೊಳ್ಳುತ್ತಿದ್ದ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಗಿರಿನಗರದ ಪುಟ್ಟಸ್ವಾಮಿ ಸಾವಿರಾರು ಮಂದಿಯಿಂದ ಹಣ ಕಟ್ಟಿಸಿಕೊಂಡು ವಂಚನೆ ನಡೆಸಿ ಪರಾರಿಯಾಗಿದ್ದು, ಈ ಸಂಬಂಧ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಲಾಗಿದೆ.
ಒಬ್ಬೊಬ್ಬರ ಬಳಿ 4 ರಿಂದ 5 ಸಾವಿರ ಹಣ ಪಡೆದು ಪುಟ್ಟಸ್ವಾಮಿ ಓಡಿ ಹೋಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಮೋಸ ಹೋದ ಸಮಾರು ಐದು ಸಾವಿರಕ್ಕೂ ಅಧಿಕ ಮಂದಿ ಆತನ ಗಿರಿನಗರದ ಮನೆ ಮುಂದೆ ಜಮಾಯಿಸಿದರು
ಕಳೆದ ಎರಡು ವರ್ಷಗಳಿಂದ ಪುಟ್ಟಸ್ವಾಮಿ ಯುಗಾದಿ ಚೀಟಿ ನಡೆಸುತ್ತಿದ್ದಾರೆ ಎರಡೂ ವರ್ಷವೂ ನಮಗೆ ದಿನಸಿ ಹಾಗೂ ಪ್ರತಿ ಚೀಟಿಗೆ ಐದರಿಂದ ಏಳು ಕಿಲೋ ಮಾಂಸ ಕೊಟ್ಟಿದ್ದರು.ಈ ಬಾರಿಯೂ ಹೀಗೆ ಸಿಗಲಿದೆ ಎಂದು ನಮ್ಮ ಸಂಬಂಧಿಕರೆಲ್ಲರಿಂದ ಚೀಟಿ ಹಾಕಿಸಿದ್ದೆ ಈಗ ಏನೂ ಇಲ್ಲದಂತಾಗಿದೆ.ಹಬ್ಬಕ್ಕೆ ಸಾಮಗ್ರಿ ಹೊಂದಿಸುವುದು ಹೇಗೆ ಎಂದು ಮೋಸ ಹೋದ ಜನ ಗೋಳಾಡುತ್ತಿದ್ದಾರೆ.
ಸಾವಿರಾರು ಜನ ಪುಟ್ಟಸ್ವಾಮಿ ಮನೆಯ ಮುಂದೆ ಜಮಾಯಿಸಿರುವ ವಿಷಯ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪುಟ್ಟಸ್ವಾಮಿಗಾಗಿ ಶೋಧ ನಡೆಸಿದ್ದಾರೆ.
3 Comments
Вывод из запоя на дому https://fizioterapijakeskic.com .
Кодировка от алкоголизма в Алматы цена Кодировка от алкоголизма в Алматы цена .
поиск человека по номеру телефона геолокация http://www.poisk-po-nomery.ru .