ಬೆಂಗಳೂರು,ಏ.20- ಇಂಜಿನಿಯರಿಂಗ್ ಪ್ಯಾರಾ ಮೆಡಿಕಲ್ ಸೇರಿದಂತೆ ವಿವಿಧ ಪದವಿ ಹುದ್ದೆಗಳ ಪ್ರವೇಶಕ್ಕೆ ಪರೀಕ್ಷಾ ಪ್ರಾಧಿಕಾರ ನಡೆಸಲಾದ ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಹೆಚ್ಚಾಗಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಗಣಿತ ಭೌತಶಾಸ್ತ್ರ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ 46 ಪ್ರಶ್ನೆಗಳು ಪಠ್ಯಪುಸ್ತಕವನ್ನು ಹೊರತಾಗಿ ಕೇಳಲಾಗಿದೆ ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಆತಂಕ ಉಂಟಾಗಿದೆ ಎಂದು ಹೇಳಿದ್ದಾರೆ ಈ ನಡುವೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಅನುದಾನ ರಹಿತ ಶಾಲೆಗಳ ಒಕ್ಕೂಟ ಪರೀಕ್ಷಾ ಪ್ರಾಧಿಕಾರ ಮೊನ್ನೆ ನಡೆಸಿದ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಿ,ಕೂಡಲೇ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದೆ.
ವೃತ್ತಿ ಶಿಕ್ಷಣ ಪ್ರವೇಶ ಬಯಸಿ ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಹಗಲು ರಾತ್ರಿ ಎಂದು ನೋಡದೆ ಕಷ್ಟಪಟ್ಟು ಓದಿದ್ದಾರೆ ಆದರೆ ಪರೀಕ್ಷೆ ಪ್ರಾಧಿಕಾರ ಇವರ ವಿಷಯದಲ್ಲಿ ಚೆಲ್ಲಾಟ ಮಾಡುತ್ತಿದೆ ಎಂದು ಆಪಾದಿಸಿದರು.
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕಲ್ಲಾಟವಾಡಿರುವ ಅಧಿಕಾರಿಗಳು ಸೇರಿದಂತೆ ಸಂಬಂಧ ಪಟ್ಟವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಒಟ್ಟು 240 ಅಂಕಗಳಲ್ಲಿ 46 ಪ್ರಶ್ನೆಗಳು ಪಠ್ಯ ಪುಸ್ತಕದಿಂದ ಕೊರತಾಗಿವೆ ಇದರಿಂದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮರು ಪರೀಕ್ಷೆ ಒಂದೇ ಉಳಿದಿರುವ ಮಾರ್ಗ ಎಂದು ಹೇಳಿದರು.
ಸರ್ಕಾರ ಕೂಡಲೇ ಮಧ್ಯಪ್ರದೇಶದ ತಪ್ಪಿತಸ್ಥರ ಸ್ಥಯ ವಿರುದ್ಧ ಕ್ರಮದ ಜೊತೆಗೆ ಮರು ಪರೀಕ್ಷೆಗೆ ಆದೇಶದ ಬೇಕು ಇಲ್ಲವಾದರೆ ಕಾನೂನು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.