ಬೆಂಗಳೂರು,ಜೂ.19-ಅಮೆಜಾನ್ ನಲ್ಲಿ ಎಕ್ಸ್ ಬಾಕ್ಸ್ ಕಂಟ್ರೋಲರ್ ಬುಕ್ ಮಾಡಿದ್ದ ದಂಪತಿಗಳು ಪಾರ್ಸೆಲ್ ತೆಗೆಯುತ್ತಿದ್ದಂತೆ ಬುಸುಗುಟ್ಟುತ್ತಿರುವ ಹಾವು ಕಂಡು ದಂಗಾದ ದಂಪತಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆ ಸರ್ಜಾಪುರದಲ್ಲಿ ನಡೆದಿದೆ.
ಸಾಫ್ಟ್‌ವೇರ್ ಉದ್ಯೋಗದಲ್ಲಿರುವ ಈ ದಂಪತಿ ವಾರದ ಹಿಂದೆಯಷ್ಟೇ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದು, ಪಾರ್ಸೆಲ್ ಮನೆ ಬಾಗಿಲಿಗೆ ಬಂದು ತಲುಪಿದೆ.
ಪಾರ್ಸೆಲ್ ತೆರೆಯುತ್ತಿದ್ದಂತೆ ಅದರೊಳಗೆ ಎಕ್ಸ್‌ಬಾಕ್ಸ್ ಕಂಟ್ರೋಲರ್ ಬದಲಾಗಿ ನಾಗರಹಾವೊಂದು ಏಡೆ ಎತ್ತಿ ನಿಂತಿದೆ.
ತಕ್ಷಣ ಬಾಕ್ಸ್ ಅನ್ನು ಮುಚ್ಚಿ ತಮಗಾದ ಕರಾಳ ಅನುಭವವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಪ್ಯಾಕೇಜಿಂಗ್ ಟೇಪ್‌ನಲ್ಲಿ ಸಿಲುಕಿಕೊಂಡಿದ್ದ ನಾಗರಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆಯ ಬಳಿಕ ಅಮೇಜಾನ್ ಕಂಪೆನಿ ದಂಪತಿಗೆ ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗೆ ನೀಡಿದ್ದ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದೆ. ಆದರೆ, ವಿಷಪೂರಿತ ಹಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ತಪ್ಪಾಗಿ ಪಾರ್ಸೆಲ್ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ. ಆದರೆ ಪಾರ್ಸೆಲ್ ಒಳಗಡೆ ಜೀವಂತ ಹಾವು ಹೇಗೆ ಬಂತು? ಎಂಬುದು ಪ್ರಶ್ನೆಯಾಗಿ ಉಳಿದುಕೊಂಡಿದೆ.
Previous Articleದರ್ಶನ್ ಅಭಿಮಾನಿಗಳಿಂದ ನಟ ಪ್ರಥಮ್ ಗೆ ಬೆದರಿಕೆ ಕರೆ.
Next Article ಚನ್ನಪಟ್ಟಣದಿಂದ ಡಿ.ಕೆ.ಶಿವಕುಮಾರ್ ವಿಧಾನಸಭೆ ಸ್ಪರ್ಧೆ.!