ಮದುವೆಯಾಗಲು ಮುಂದಾದ ಸುಡಾನ್ ಮೂಲದ ಯುವತಿಯೊಬ್ಬಳು ಭಾವೀ ಪತಿಗಾಗಿ ಅತ್ಯಂತ ಭಿನ್ನವಾಗಿ ಹುಡುಕಾಟ ಆರಂಭಿಸಿದ್ದಾಳೆ. ಈ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಸುಡಾನ್ ರಾಜಧಾನಿ ಖಾರ್ಟೂಮ್ನ ಬೀದಿಗಳಲ್ಲಿ ಈ ಯುವತಿ ‘ವರ ಬೇಕು’ ಎಂಬ ಭಿತ್ತಿಫಲಕವನ್ನು ನೇತು ಹಾಕಿಕೊಂಡು ಓಡಾಡುತ್ತಿದ್ದಾಳೆ. ನನಗೆ ಬಹುಪತ್ನಿತ್ವವಾದರೂ ಪರವಾಗಿಲ್ಲ. ಮದುವೆಯಾಗಲು ವರ ಬೇಕು ಎಂದು ಫಲಕದಲ್ಲಿ ಬರೆದುಕೊಂಡಿದ್ದಾಳೆ.
ಸುಡಾನ್ನಲ್ಲಿ 2020ರಿಂದ ಮದುವೆಯಾಗುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. 2018ಕ್ಕೆ ಹೋಲಿಕೆ ಮಾಡಿದರೆ ವೈವಾಹಿಕ ಜೀವನಕ್ಕೆ ಕಾಲಿಡುವವರ ಸಂಖ್ಯೆಯಲ್ಲಿ 21 ಪ್ರತಿಶತದಷ್ಟು ಕಡಿಮೆಯಾಗಿದೆ.