ಬೆಂಗಳೂರು,ಆ.31-
ಉದ್ಯೋಗ ಸೇರಿದಂತೆ ವಿವಿಧ ಕಾರಣಕ್ಕಾಗಿ
ಬಾಂಗ್ಲಾದೇಶದ ವಲಸಿಗರು ಅಕ್ರಮವಾಗಿ ದೇಶದೊಳಗೆ ನುಸುಳಿ ರಾಜದ ಕೆಲವು ಕಡೆ ನೆಲೆಸಿರುವ ಬಗ್ಗೆ ಮಾಹಿತಿಗಳು ಹೊರ ಬರುತ್ತಿದ್ದು ಆತಂಕ ಮೂಡಿಸಿದೆ.
ಅದರಲ್ಲೂ ಕಾಫಿ ತೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ವಲಸೆಗರು ಕೂಲಿ ಕಾರ್ಮಿಕರಾಗಿ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಗುಪ್ತದಳವನ್ನು ತಲುಪಿದೆ.
ಅದರಂತೆ ಹಾಸನದಲ್ಲಿ ಆಸ್ಸಾಂ ರಾಜ್ಯದ ಮೂಲದವರೆಂದು ಹೇಳಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಜಿಲ್ಲೆಯಲ್ಲಿ ನೆಲೆಸಿರುವ ಸಂಬಂಧ ಪೊಲೀಸರು ಮಾಹಿತಿ ಕಲೆ ಕಲೆಹಾಕುತ್ತಿದ್ದಾರೆ.
ಕೂಲಿ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರು ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ನೆಲಸಿದ್ದಾರೆ. ಅರಕಲಗೂಡು ತಾಲೂಕಿನ ವಿವಿದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಸ್ಥಳೀಯರು ತಿಳಿಸಿದ್ದಾರೆ.
ತಾವು ಆಸ್ಸಾಂ ಮೂಲದವರೆಂದು ನಕಲಿ ಆದಾರ್ ಕಾರ್ಡ್ ತೋರಿಸಿ, ವಿವಿದೆಡೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ಕೆಲ ಮಾಲೀಕರು ಯಾವುದೇ ದಾಖಲೆ ಪರಿಶೀಲನೆ ಮಾಡದೆ ಕಾರ್ಮಿಕರ ಅನಿವಾರ್ಯತೆ ಹೆಸರಿನಲ್ಲಿ ಕೆಲಸ ನೀಡುತ್ತಿದ್ದಾರೆ ಎಂದು ಹೇಳುತ್ತಾರೆ
ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಉದ್ಭವಿಸಿದೆ. ಹೀಗಾಗಿ, ಕೆಲ ಏಜೆಂಟರು ಬಾಂಗ್ಲಾದೇಶದ ಜನರನ್ನು ಕರೆತಂದು, ಇಲ್ಲಿ, ಅವರ ಹೆಸರಿನಲ್ಲಿ ಆಸ್ಸಾಂ ರಾಜ್ಯದ ನಿವಾಸಿ ಅಂತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾರೆ. 5 ರಿಂದ 10 ಸಾವಿರ ಹಣ ಪಡೆದು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತ್ತಿರುದ್ದಾರೆ. ಈ ನಕಲಿ ಆಧಾರ್ ಕಾರ್ಡ್ಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ವಿತರಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಕಲಿ ದಾಖಲೆ ಮೂಲಕ ಅಕ್ರಮವಾಗಿ ವಲಸಿಗರು ಬರುತ್ತಿರುವ ಬಗ್ಗೆ ಬೆಂಗಳೂರು ವಿಭಾಗದ ಆಧಾರ್ ವಿತರಣೆ ಸಂಸ್ಥೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಅಧಿಕಾರಿಗಳು ಪರಿಶೀಲನೆಗೆ ಇಳಿದರು. ಪರಿಶೀಲನೆ ವೇಳೆ ಒಂದೇ ದಾಖಲೆ ಬಳಸಿ ದಿನಾಂಕ, ಹೆಸರು ತಿದ್ದಿ ಹತ್ತಾರು ಆಧಾರ್ ಕಾರ್ಡ್ ವಿತರಣೆ ಮಾಡಲಾಗಿದೆ. ಆದಾರ್ ಕಾರ್ಡ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಯಾವುದೇ ಮಾಹಿತಿ ದೊರೆಯದಿದ್ದಾಗ ಅನುಮಾನ ಗಾಢವಾಗಿದೆ. ಗಂಡು, ಹೆಣ್ಣು ಕಲಂನಲ್ಲೂ ತಪ್ಪು ಮಾಹಿತಿಗಳು ನಮೂದಿಸಿರುವುದು ಬಯಲಾಗಿದೆ.
ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಅನುಶ್ರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Previous Articleಬೆಂಗಳೂರಲ್ಲಿ ಮತ್ತೆ ವಾಹನ ಟೋಯಿಂಗ್.
Next Article ಕಳ್ಳರದ್ದು ವಿಮಾನದಲ್ಲೇ ಹಾರಾಟ.