ಬೆಂಗಳೂರು,ಸೆ.24-
ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ, ಹನಿಟ್ರ್ಯಾಪ್ ಷಡ್ಯಂತ್ರ ಸೇರಿದಂತೆ ಹಲವು ಪ್ರಕರಣಗಳ ಕುರಿತು
ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡ(ಎಸ್ ಐಟಿ)ಕ್ಕೆ 25 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ನೇಮಕ ಮಾಡಿಕೊಳ್ಳಲಾಗಿದೆ.
ಓರ್ವ ಎಸಿಪಿ, ಇಬ್ಬರು ಡಿಎಸ್ಪಿ, ಓರ್ವ ಮಹಿಳಾ ಪಿಐ ಸೇರಿ ನಾಲ್ವರು ಇನ್ಸ್ ಪೆಕ್ಟರ್ಗಳು, ಮೂವರು ಪಿಎಸ್ಐ ಹಾಗೂ ಇಬ್ಬರು ಎಎಸ್, ಓರ್ವ ಮಹಿಳಾ ಹೆಚ್ಸಿ ಸೇರಿ ಮೂವರು ಹೆಚ್ಸಿ ಹಾಗೂ ಇಬ್ಬರು ಪಿಸಿ, ಮೂವರು ಆರ್ಹೆಚ್ಸಿ, ಮೂವರು ಆರ್ಪಿಸಿ, ಇಬ್ಬರು ಮಹಿಳಾ ಆರ್ಪಿಸಿಗಳನ್ನು ಎಸ್ ಐಟಿಗೆ ನೇಮಕ ಮಾಡಲಾಗಿದೆ.
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಸೆಷ್ಟೆಂಬರ್ 21 ರಂದು ಮುಖ್ಯಸ್ಥರಾಗಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿ ಸರ್ಕಾರ ಆದೇಶಸಿತ್ತು.ಈಗ ಇದಕ್ಕೆ ಸಿಸಿಬಿ ಎಸಿಪಿ ಧರ್ಮೆಂದ್ರ,ಡಿಎಸ್.ಪಿ.ರವಿಕುಮಾರ್, ಡಿಎಸ್ಪಿ ಕವಿತಾ, ಪಿಐ ಗಳಾದ ಸುನೀಲ್, ಬಾಲರಾಜ್, ಅವಿನಾಶ್ರನ್ನು ನೇಮಕ ಮಾಡಿದೆ.
ಬಿಜೆಪಿ ಶಾಸಕ ಮುನಿರತ್ನ ಮೂರು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. 2 ಕೇಸ್ಗಳಿಂದ ಜಾಮೀನಿನ ಮೇಲೆ ಹೊರ ಬಂದು ಮತ್ತೊಂದರಲ್ಲಿ ಜೈಲು ಪಾಲಾಗಿದ್ದಾರೆ.
ಇದರ ನಡುವೆ ಮುನಿರತ್ನ ಬೆಂಬಲಿಗರು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಹಾಗೂ ದಲಿತರ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಮುನಿರತ್ನ ಬೆಂಬಲಿಗರ ಬೆದರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
Previous Articleಇಬ್ಬರು ಮಂತ್ರಿಗಳಿಗೆ ಕಂಟಕ.
Next Article ಸಿಎಂ ಗೆ ಹೈಕಮಾಂಡ್ ಕೊಟ್ಟ ಸೂಚನೆ ಏನು ಗೊತ್ತಾ.