ಬೆಂಗಳೂರು,ಅ.3-
ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಕುರಿತಾಗಿ ಆಶ್ಚರ್ಯಕರ ಹೇಳಿಕೆಯನ್ನು ನೀಡುವ ಮೂಲಕ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಾರೆ.
ದಸರಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಇನ್ನೊಂದು ವರ್ಷ ದೇವಿ ನನಗೆ ಅಧಿಕಾರ ನಡೆಸಲು ಆರ್ಶೀವಾದ ಮಾಡಲಿ. ಉತ್ತಮ ಕೆಲಸ ಮಾಡಲು ದೇವಿ ಇನ್ನೊಂದು ವರ್ಷವಾದರೂ ಆಶೀರ್ವದಿಸಲಿ. ಜನರ ಸೇವೆ ಮಾಡಲು ಆ ತಾಯಿ ಚಾಮುಂಡಿ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುವೆ ಎಂದಿದ್ದಾರೆ.
ಅಧಿಕಾರದ ಹಂಚಿಕೆ ಬಗ್ಗೆಯೇ ಸಿಎಂ ಈ ರೀತಿಯ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಇನ್ನೊಂದು ವರ್ಷ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರಿದರೆ ಎರಡೂವರೆ ವರ್ಷ ಪೂರೈಸಿದಂತಾಗುತ್ತದೆ. ಒಂದು ವರ್ಷದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಚರ್ಚೆ, ಕುತೂಹಲ ಇದೀಗ ಸಿಎಂ ಭಾಷಣ ಮೂಡಿಸಿದೆ.
ಇದರ ನಡುವೆ ನಿವೇಶನ ಹಂಚಿಕೆ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದು ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾದ ಅನಿವಾರ್ಯತೆ ಉಂಟಾಗಲಿದೆ ಹೀಗಾಗಿಯೇ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗದ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Previous Articleಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾನಾ ಸಮಸ್ಯೆ.
Next Article ಸ್ವಪಕ್ಷೀಯರ ವಿರುದ್ಧ ಗುಡುಗಿದ ದೇವೇಗೌಡ.