ಬೆಂಗಳೂರು,ಅ.5-
ಮಹಾನಗರ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಾ ಸಂಚಾರ ದಟ್ಟಣೆ ಉಂಟಾಗಿ ಸಿಗ್ನಲ್ಗಳಲ್ಲಿ ಕಿಮೀಗಟ್ಟಲೆ ನಿಲ್ಲುವ ವಾಹನಗಳ ಮಧ್ಯೆ ಸಿಲುಕುವ ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕಾಗಿ ನಗರ ಸಂಚಾರ ಪೊಲೀಸರು ಹೊಸ ಆ್ಯಪ್ ಅಳವಡಿಸಿ ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು “ಇ-ಪಾತ್” ಎಂಬ ಆ್ಯಪ್ ಪರಿಚಿಯಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕರು ಇ-ಪಾತ್ ಆ್ಯಪ್ ಹೊಂದದ್ದರೆ ಯಾವುದೇ ಸಿಗ್ನಲ್ನಲ್ಲಿ ನಿಲ್ಲದೆ ಚಲಿಸಬಹುದಾಗಿದೆ.
ಆಂಬ್ಯುಲೆನ್ಸ್ ಸಿಗ್ನಲ್ ಬಳಿ ಬರುತ್ತಿರುವ ಮಾಹಿತಿ ಜಿಪಿಎಸ್ ಮತ್ತು ಅಡಾಪ್ಟಿವ್ ಮೂಲಕ ಸಂಚಾರ ಪೊಲೀಸರಿಗೆ ತಿಳಿಯುತ್ತದೆ. ಆಗ, ಆಂಬ್ಯುಲೆನ್ಸ್ಗಾಗಿ ಸಿಗ್ನಲ್ ಕ್ಲಿಯರ್ ಮಾಡಲಾಗುತ್ತದೆ. ಆಂಬ್ಯುಲೆನ್ಸ್ ಸಿಗ್ನಲ್ನಲ್ಲಿ ನಿಲ್ಲದೆ ಹೋಗಬಹುದು.
ಇ-ಪಾತ್ ಆ್ಯಪ್ ಪ್ರಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ತಿಂಗಳ ಅಂತ್ಯದಲ್ಲಿ ಎಲ್ಲ ಆಂಬುಲೆನ್ಸ್ ಚಾಲಕರು ಈ ಆ್ಯಪ್ ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಈಗಾಗಲೇ ಖಾಸಗಿ ಆಂಬ್ಯುಲೆನ್ಸ್ ಮಾಲೀಕರು ಹಾಗೂ ಸಂಘಟನೆ ಜೊತೆ ಸಭೆ ನಡೆದಿದ್ದು, ಎಲ್ಲ ಆಂಬ್ಯುಲೆನ್ಸ್ ಚಾಲಕರು ಆ್ಯಪ್ ಬಳಸುವಂತೆ ಸೂಚಿಸಲಾಗಿದೆ. ಇದರಿಂದ ಆಂಬ್ಯುಲೆನ್ಸ್ಗಳು ಟ್ರಾಫಿಕ್ ಸಿಗ್ನಲ್ಗಳಲ್ಲಿ ಸಿಲುಕುವುದನ್ನು ತಡೆಗಟ್ಟಬಹುದು ಎಂದು ಹೇಳಿದರು.
ಇ-ಪಾತ್ ಆ್ಯಪ್ ಹೇಗೆ:
*ಆಂಬ್ಯುಲೆನ್ಸ್ ಚಾಲಕ ಫ್ಲೇ ಸ್ಟೋರ್ನಲ್ಲಿ ಇ-ಪಾತ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.
*ಆ್ಯಂಬುಲೆನ್ಸ್ ಎಲ್ಲಿಂದ ಎಲ್ಲಿಗೆ ಹೋಗುತ್ತೆ ಅಂತ ಮಾಹಿತಿ ಅಪ್ಲೋಡ್ ಮಾಡಬೇಕು.
ಪ್ರಿಯಾರಿಟಿ ಯಾವುದು ಎಂದು ಆ್ಯಪ್ನಲ್ಲಿ ಮಾಹಿತಿ ನೀಡಬೇಕು.
*ಗಂಭೀರ ಅಪಘಾತ, ಹೃದಯಾಘಾತದಂತಹ ತುರ್ತು ಸೇವೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ.
*ಅಪ್ಲೋಡ್ ಆದ ಮಾಹಿತಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಹೋಗಲಿದೆ.
ಸುಗಮ ಸಂಚಾರಕ್ಕೆ ವ್ಯವಸ್ಥೆ:
ಇದನ್ನು ಪರಿಶೀಲಿಸಿ ಜಿಪಿಎಸ್ ಆಧಾರದಲ್ಲಿ ಅಡಾಪ್ಟಿವ್ ಸಿಗ್ನಲ್ಗಳ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಸಿಗ್ನಲ್ ಇಲ್ಲದ ಕಡೆ ಆಂಬ್ಯುಲೆನ್ಸ್ ವೇಗ ಕಡಿಮೆಯಾದರೆ ಅಲರ್ಟ್ ಮೆಸೇಜ್ ಸಂಚಾರ ಪೊಲೀಸರಿಗೆ ಹೋಗುತ್ತದೆ.
ಅದರ ಆಧಾರದಲ್ಲಿ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ವ್ಯವಸ್ಥೆ ಮಾಡುತ್ತಾರೆ ಎಂದು ಎಂ.ಎನ್ ಅನುಚೇತ್ ತಿಳಿಸಿದರು.
Previous Articleಬಿಎಂಟಿಸಿ ಸಿಬ್ಬಂದಿಯಿಂದ ಗನ್ ಲೈಸೆನ್ಸ್ ಗಾಗಿ ಸರ್ಕಾರಕ್ಕೆ ಮನವಿ.
Next Article ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನು ಬೇಕು.