ಬೆಂಗಳೂರು,ಅ.5:
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಸಿಗರೇಟು, ಬೀಡಿ, ತಂಬಾಕು, ಮೊಬೈಲ್ ಫೋನ್ ಸೇರಿದಂತೆ ಎಲ್ಲ ರೀತಿಯ ವಸ್ತುಗಳು ಸುಲಭವಾಗಿ ಲಭ್ಯವಾಗಲಿವೆ. ಇವುಗಳನ್ನು ಜೈಲು ಸಿಬ್ಬಂದಿಯೇ ಪೂರೈಸುತ್ತಿದ್ದಾರೆ.
ಈ ಮಾಹಿತಿ ಅಚ್ಚರಿ ಎನಿಸುತ್ತದೆಯೇ ? ಹೌದು ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಇವುಗಳನ್ನು ಜೈಲಿನಲ್ಲಿ ಮಾರಾಟ ಮಾಡಲಾಗುವುದಿಲ್ಲ ಬದಲಿಗೆ ಹಣ ಕೊಟ್ಟವರಿಗೆ ಜೈಲು ಸಿಬ್ಬಂದಿಯೇ ಪೂರೈಸುತ್ತಾರೆ.
ಇಂತಹ ಸ್ಪೋಟಕ ಮಾಹಿತಿಯನ್ನು ನೀಡಿರುವುದು ಹಿರಿಯ ಪೊಲೀಸ್ ಅಧಿಕಾರಿ ಸಾ.ರಾ.ಫಾತೀಮಾ. ತಮ್ಮ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಸೇರಿದ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸಂಗಡಿಗರಿಗೆ ಜೈಲಿನಲ್ಲಿ ಹಲವಾರು ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿತ್ತು.
ನಟ ದರ್ಶನ್ ಅವರಿಗೆ ಸಿಗರೇಟು, ಬನಶಂಕರಿ ಮರಾಠಿ ಮಿಲ್ಟ್ರಿ ಹೋಟೆಲ್ ನಿಂದ ಬಿರಿಯಾನಿ ಊಟ ಸೇರಿದಂತೆ ಹಲವು ಸೌಲಭ್ಯಗಳನ್ನು ಪೂರೈಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ದರ್ಶನ್ ತಮ್ಮ ಆಪ್ತದೊಂದಿಗೆ ಜೈಲಿನ ಆವರಣದಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ ಫೋಟೋಗಳು ಬಹಿರಂಗಗೊಳ್ಳುವ ಮೂಲಕ ದೊಡ್ಡ ವಿವಾದ ಸೃಷ್ಟಿಯಾಗಿತ್ತು.
ಈ ಬಗ್ಗೆ ತನಿಖೆ ನಡೆಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಡಿಸಿಪಿ ಸಾ.ರಾ. ಫಾತೀಮಾ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಈ ತಂಡ ಈಗ ತಮ್ಮ ತನಿಖಾ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದೆ.
ಈ ವರದಿಯಲ್ಲಿ ಜೈಲಿನ ಕೆಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಖೈದಿಗಳ ಜೊತೆ ಶಾಮೀಲಾಗಿ ಹಣ ಕೊಟ್ಟರೆ ಐಷಾರಾಮಿ ವಸ್ತುಗಳನ್ನು ಪೂರೈಸುತ್ತಾರೆ. ಇಂಥದೊಂದು ತಂಡ ವ್ಯವಸ್ಥೆಯವಾಗಿ ಕಾರ್ಯನಿರ್ವಹಿಸುತ್ತಿದೆ ಇದರ ಬಗ್ಗೆ ಮಾಹಿತಿ ಪಡೆದ ದರ್ಶನ್ ಮತ್ತು ಅವರ ಸಹಚರರು ಹಣ ಕೊಟ್ಟು ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ವಿವರವಾಗಿ ತಿಳಿಸಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರುಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ.
Previous Articleಬೆಂಗಳೂರಿನಲ್ಲಿ ಆಂಬುಲೆನ್ಸ್ ಗಿಲ್ಲ ಅಡ್ಡಿ.
Next Article ಹೈ ಕೋರ್ಟ್ ಕಾರ್ಯ ಕಲಾಪಗಳಿಗೆ ದಸರಾ ರಜೆ