ಬೆಂಗಳೂರು,ಆ.9:
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಆರೋಪ ಮಾಡಿರುವ ತಂತ್ರಸ್ತ ಮಹಿಳೆ ಇದೀಗ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿದ್ದಲ್ಲಿ ತಮ್ಮಲ್ಲಿರುವ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿರುವ ಅವರು ಮುನಿರತ್ನ ಅವರು ತಮ್ಮನ್ನು ಬಳಸಿಕೊಂಡು ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿ ಟ್ರ್ಯಾಪ್ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ.
ಮುನಿರತ್ನ ಅವರು ತಮ್ಮ ಕೆಲಸ ಸಾಧಿಸಿಕೊಳ್ಳಲು ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಇಬ್ಬರು ಮಾಜಿ ಸಿಎಂಗಳ ವಿಡಿಯೋಗಳು ನನ್ನ ಬಳಿ ಇದೆ.ಇವುಗಳು ಮುನಿರತ್ನ ಅವರ ಬಳಿಯೂ ಇವೆ ಇವುಗಳನ್ನು ಅವರು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದ್ದರೂ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಸದ್ಯ ಈ ಮಾಜಿ ಮುಖ್ಯಮಂತ್ರಿಗಳು ಯಾರೆಂದು ಮಾತ್ರ ಬಹಿರಂಗಪಡಿಸುವುದಿಲ್ಲ. ತಮಗೆ ಮುನಿರತ್ನ ಆಪ್ತರೂ ಸೇರಿದಂತೆ ಕೆಲವರಿಂದ ಅಪಾಯವಿದೆ ಹೀಗಾಗಿ ಸೂಕ್ತ ರಕ್ಷಣೆ ಕೊಟ್ಟರೆ ವಿಡಿಯೋ ನೀಡುತ್ತೇನೆ ಎಂದು ತಿಳಿಸಿದರು. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖೆ ತಂಡಕ್ಕೆ ಎಲ್ಲ ಮಾಹಿತಿಯನ್ನು ನೀಡಿದ್ದೇನೆ ಎಂದು ಹೇಳಿದರು.
Previous Articleಮೂವರು ಮಂತ್ರಿಗಳು ಏನು ಮಾಡುತ್ತಿದ್ದಾರೆ.
Next Article ನೌಕಾನೆಲೆ ಬಳಿ ಹಾರಾಡಿದ ದ್ರೋನ್.