ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ (Property Tax) ಬಾಕಿ ಉಳಿಸಿಕೊಂಡವರಿಗೆ ಅಥವಾ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿ ಕಡಿಮೆ ತೆರಿಗೆ ಪಾವತಿಸಿದ ಮಾಲೀಕರಿಗೆ ವಿಧಿಸಲಾಗುತ್ತಿದ್ದ ಎರಡು ಪಟ್ಟು ದಂಡದ ಮೊತ್ತವನ್ನು ಶೇ.50ಕ್ಕೆ ಇಳಿಕೆ ಮಾಡಿದ್ದು, ಇದನ್ನು ಪಾವತಿಸಲು ರಾಜ್ಯ ಸರ್ಕಾರ ಒನ್ ಟೈಮ್ ಸೆಟ್ಲ್ಮೆಂಟ್ (OTS) ಜಾರಿ ಮಾಡಿದೆ. ಇದರಿಂದ ಪಾವತಿದಾರ ಪೂರ್ಣ ಹಣವನ್ನು ಪಾವತಿಸುವ ಬದಲು ಶೇ.50% ಕಡಿಮೆ ಹಣವನ್ನು ಪಾವತಿಸಬಹುದು.
ಫೆಬ್ರವರಿ,2024ರಲ್ಲಿ ಮೊದಲ ಬಾರಿಗೆ ಓಟಿಎಸ್ ಪ್ರಾರಂಭಿಸಿದ ಬಿ.ಬಿ.ಎಂ.ಪಿ, ಜುಲೈವರೆಗೆ ಓಟಿಎಸ್ ಪಾವತಿಗೆ ಅವಕಾಶ ನೀಡಲಾಗಿತ್ತು. ನಂತರ ಯೋಜನೆಯನ್ನು ಮೊದಲ ಬಾರಿಗೆ ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಯಿತು. ಇದೀಗ ಪುನಃ ನವೆಂಬರ್ 30ರ ವರೆಗೆ ಈ ಸಮಯವನ್ನು ವಿಸ್ತರಿಸಲಾಗಿದೆ.
ಪ್ರಕ್ರಿಯೆ ಹೇಗಿರುತ್ತದೆ?
- ಆಸ್ತಿ ಮಾಲೀಕರು OTP ಬಳಸಿಕೊಂಡು ತಮ್ಮ ಮೊಬೈಲ್ ಮೂಲಕ ಬಿಬಿಎಂಪಿ ಆಸ್ತಿ ತೆರಿಗೆಯ ಸ್ವಯಂ ಮೌಲ್ಯಮಾಪನ ವ್ಯವಸ್ಥೆ (SAS)ಗೆ ಲಾಗ್ ಇನ್ ಆಗಬೇಕು.
- ಅದರಲ್ಲಿ ಮಾರಾಟದ ಕರಾರು ಪತ್ರ ಅಥವಾ ವರ್ಗಾವಣೆ ಪತ್ರದ ಸಂಖ್ಯೆಯನ್ನು ನಮೂದಿಸಬೇಕು.
- ಅದರ ಆಧಾರದ ಮೇಲೆ ಕಾವೇರಿ-2 ತಂತ್ರಾಂಶದಿಂದ ಆಸ್ತಿ ಮತ್ತು ಅದರ ಮಾಲೀಕರ ವಿವರವಿರುವ ಪ್ರಮಾಣ ಪತ್ರ ಒದಗಿಸಲಾಗುತ್ತದೆ.
- ಅನಂತರ ಆಸ್ತಿಯ ಚಿತ್ರ, ಅದರ ಜಿಪಿಎಸ್ ಇರುವ ವಿಳಾಸದ ಸಂಪೂರ್ಣ ವಿವರ ದಾಖಲಿಸಬೇಕು.
- ನಂತರ ಮಾಲೀಕರ ವಿವರವನ್ನು ಅಥವಾ ದಾಖಲೆಗಳನ್ನು ಕಾವೇರಿ-2 ತಂತ್ರಾಂಶದಲ್ಲಿ ಪರಿಶೀಲನೆ ಮಾಡಲಾಗುತ್ತದೆ.
- ಅಸ್ತಿ ಮಾಲೀಕರು ನೀಡಿರುವ ದಾಖಲೆಗಳು ಸರಿ ಇದ್ದಾಗ ಮಾತ್ರ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ. ದಾಖಲೆಗಳು ತಪ್ಪಾಗಿದ್ದಲ್ಲಿ ತೆರಿಗೆ ಪಾವತಿಸಲು ಸಾದ್ಯವಾಗುವುದಿಲ್ಲ. ಆದ್ದರಿಂದ ಅಸ್ತಿ ಮಾಲೀಕರು ನೀಡುವ ದಾಖಲೆಗಳನ್ನು ಪರಿಶೀಲಿಸಲು ಸಂಬಂಧ ಪಟ್ಟ ಕಂದಾಯ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.ಈ ದಾಖಲೆಗಳು ದೃಢೀಕರಿಸಲ್ಪಟ್ಟ ನಂತರ ಬಿಬಿಎಂಪಿಯ ಎಸ್‌ಎಎಸ್ ಅಡಿಯಲ್ಲಿ ಅವರಿಗೆ ಆಸ್ತಿ ಗುರುತಿನ ಸಂಖ್ಯೆ ನೀಡಲಾಗುತ್ತದೆ.
- ಆಸ್ತಿ ಗುರುತಿನ ಸಂಖ್ಯೆಯಡಿ ಫಾರ್ಮ್-3ರಲ್ಲಿ ಆಸ್ತಿ ಬಳಕೆಯ ವಿವರಗಳನ್ನು ನಮೂದಿಸಿ, ಒಟಿಎಸ್ ಅಡಿ ಅನ್ವಯವಾಗುವಂತೆ ಆಸ್ತಿ ತೆರಿಗೆಗೆ ಖಾತವನ್ನು ಪಡೆಯಲು ಅರ್ಜಿ ಸಲ್ಲಿಸಬೇಕು
- ಅನಂತರ ಖಾತಗಾಗಿ ಸಲ್ಲಿಸುವ ದಾಖಲೆಗಳನ್ನು 90 ದಿನಗಳೊಳಗೆ ಪರಿಶೀಲಿಸಿ, ಎ ಅಥವಾ ಬಿ ಖಾತ ಒದಗಿಸುವ ಬಗ್ಗೆ ಅಧಿಕಾರಿಗಳು ನಿರ್ಣಯ ತೆಗೆದುಕೊಳ್ಳುತ್ತಾರೆ.
ಕರ್ನಾಟಕದಲ್ಲಿ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ?
- ದಾಖಲೆಗಳು – ಖಾತಾ ಪ್ರಮಾಣಪತ್ರ, ಕೊನೆಯದಾಗಿ ಕಟ್ಟಿದ ಅಸ್ತಿ ತೆರಿಗೆ ರಶೀದಿ, ಆಸ್ತಿ ಗುರುತಿನ ಸಂಖ್ಯೆ((PID) ಇದನ್ನು ನಿಮ್ಮ ಖಾತಾ ಪ್ರಮಾಣಪತ್ರದಲ್ಲಿ ಕಾಣಬಹುದು.)
- BBMP ಯ ಅಧಿಕೃತ ವೆಬ್‌ಸೈಟ್ https://bbmptax.karnataka.gov.in/ ಗೆ ಭೇಟಿ ನೀಡಿ
- ‘ನಿಮ್ಮ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ‘ಆಸ್ತಿ ತೆರಿಗೆ ವರ್ಷ (ಮೌಲ್ಯಮಾಪನ ವರ್ಷ)’ ಅನ್ನು ಆಯ್ಕೆ ಮಾಡಿ’
- ನಿಮ್ಮ ಆಸ್ತಿ ಗುರುತಿನ ಸಂಖ್ಯೆ (PID) ಅಥವಾ ಖಾತಾ ಸಂಖ್ಯೆಯನ್ನು ನಮೂದಿಸಿ ನಂತರ ಕ್ಲಿಕ್ ಮಾಡಬೇಕು.
- ಸಿಸ್ಟಮ್ ನಿಮ್ಮ ಆಸ್ತಿ ವಿವರಗಳನ್ನು ಪ್ರದರ್ಶಿಸುತ್ತದೆ ನಂತರ ‘ತೆರಿಗೆ ಪಾವತಿಸಿ’ ಮೇಲೆ ಕ್ಲಿಕ್ ಮಾಡಿ
- ಪಾವತಿ ಮೋಡ್ (ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ UPI) ಆಯ್ಕೆಮಾಡಿ ಮತ್ತು ಪಾವತಿ ಮಾಡಿ.
- ಪಾವತಿ ಯಶಸ್ವಿಯಾದರೆ , ನೀವು ವಹಿವಾಟು ID ಯೊಂದಿಗೆ ದೃಢೀಕರಣ ಸಂದೇಶವನ್ನು ಮತ್ತು ರಶೀದಿಯನ್ನು ಪಡೆಯುತ್ತೀರಿ.