ಶಿವಮೊಗ್ಗ.
ಮೊಬೈಲ್ ಫೋನ್ ಇದೀಗ ಎಲ್ಲ ಜನರ ಸಂಗಾತಿಯಾಗಿಬಿಟ್ಟಿದೆ ಹಾಗೆ ಕಳವಾಗುವ ವಸ್ತುಗಳ ಪೈಕಿ ಮೊಬೈಲ್ ಗೆ ಅಗ್ರಸ್ಥಾನ ಬಸ್ಸು, ರೈಲು, ಮಾರುಕಟ್ಟೆ ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ಕಳ್ಳರು ಕ್ಷಣಮಾತ್ರದಲ್ಲಿ ಮೊಬೈಲ್ ಎಗರಿಸಿ ಪರಾರಿ ಯಾಗುತ್ತಾರೆ.
ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲಿ ನಿತ್ಯ ಒಂದೆರಡಾದರೂ ಮೊಬೈಲ್ ಕಳ್ಳತನದ ದೂರುಗಳು ದಾಖಲಾಗುತ್ತದೆ. ಮೊಬೈಲ್ ಕಳ್ಳತನ ಎನ್ನುವುದು ಮಾಮೂಲಿಯಾಗಿಬಿಟ್ಟಿದೆ.
ಆದರೆ ಶಿವಮೊಗ್ಗದಲ್ಲಿ ಐನಾತಿ ಚೋರರು ಭಾರಿ ಕೈಚಳಕ ತೋರಿದ್ದಾರೆ ಇವರ ಕೈಚಳಕಕ್ಕೆ ಮೊಬೈಲ್ ಅಲ್ಲ ಕಳ್ಳತನವಾಗಿಲ್ಲ. ಬದಲಿಗೆ ಮೊಬೈಲ್ ನೆಟ್ ವರ್ಕ್ ಗಾಗಿ ಆಳವಡಿಸಲಾಗಿದ್ದ ಟವರ್ ಕಳ್ಳತನವಾಗಿದೆ
ಶಿವಮೊಗ್ಗದ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆ ಸುಗಮ ನೆಟ್ ವರ್ಕ್ ಗಾಗಿ
2008ರಲ್ಲಿ ಟವರ್ ಅಳವಡಿಸಿ ನಿರ್ವಹಣೆ ಮಾಡುತ್ತಿತ್ತು. ಆದರೆ ಹಲೋ ತಾಂತ್ರಿಕ ಕಾರಣಗಳಿಂದ ಈ ಖಾಸಗಿ ಸಂಸ್ಥೆ ಕೋವಿಡ್ ನಂತರ ಆ ಟವರ್‌ನ ನಿರ್ವಹಣೆ ಮಾಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಈಗ ಮತ್ತೆ ಟವರ್ ನಿರ್ವಹಣೆಗೆ ಖಾಸಗಿಸುವಂತೆ ಮುಂದಾಗಿದೆ ಈ ನಿಟ್ಟಿನಲ್ಲಿ ಈಚೆಗೆ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿ ಟವರ್ ಇರಲಿಲ್ಲ. ಇದರಿಂದ ಅಚ್ಚರಿಗೊಂಡ ಅವರು ಸ್ಥಳೀಯರಲ್ಲಿ ವಿಚಾರಿಸಿದ್ದಾರೆ.ಆದರೆ, ಯಾರಲ್ಲೂ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಈ ವಿಷಯವನ್ನು ಅವರು ತಮ್ಮ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ. ಅವರು ಈ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳವು ಆಗಿರುವ ಮೊಬೈಲ್‌ಫೋನ್ ಟವರ್‌ನ ಬಿಡಿಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂಪಾಯಿ ಎಂದು ಟೆಲಿಕಾಂ ಸಂಸ್ಥೆಯ ಸಿಬ್ಬಂದಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತುಂಗಾ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.
Previous Articleಆ ಒಂದು ಭಯ ಯೋಗೇಶ್ವರ್ ಕಾಂಗ್ರೆಸ್ ಸೇರಲು ಕಾರಣ.!
Next Article ಬೆಂಗಳೂರಿಗೆ ಯಾಕೆ ಇಂತಹ ಸ್ಥಿತಿ.