ಅಕ್ಟೋಬರ್, 31
ಕರ್ನಾಟಕ ಸರ್ಕಾರ ನವೆಂಬರ್ 1 ರಂದು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಒಟ್ಟು 69 ಸಾಧಕರನ್ನು ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಇದಾಗಿದ್ದು, 1966 ರಿಂದಲೂ ಕಲೆ , ಶಿಕ್ಷಣ , ಕೈಗಾರಿಕೆ, ಸಾಹಿತ್ಯ , ವಿಜ್ಞಾನ, ಕ್ರೀಡೆ , ವೈದ್ಯಕೀಯ , ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತ ಬಂದಿದೆ ಈ ಪ್ರಶಸ್ತಿಯು 5 ಲಕ್ಷ ನಗದು ಮತ್ತು 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಅವರು 2024 ರ ಒಟ್ಟು 69 ರಾಜ್ಯೋತ್ಸವ ಪ್ರಶಸ್ತಿ ಸಾಧಕರನ್ನು ಘೋಷಣೆ ಮಾಡಿದ್ದು ಇದರ ಜೊತೆ ವಿವಿಧ ಸಾಧನೆ ಮಾಡಿದ 50 ಪುರುಷರು ಹಾಗೂ 59 ಜನ ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
2024 ರ ಕನ್ನಡ ರಾಜ್ಯೋತ್ಸವ ವಿಜೇತರ ಕ್ಷೇತ್ರ ಮತ್ತು ಹೆಸರು ಕೆಳಗೆ ನೀಡಲಾಗಿದೆ.
ಜಾನಪದ ಕ್ಷೇತ್ರ
ಶ್ರೀ. ಇಮಾಮಸಾಬ ಎಂ. ವಲ್ಲೆಪನವರ
ಶ್ರೀ. ಅಶ್ವ ರಾಮಣ್ಣ
ಶ್ರೀ. ಕುಮಾರಯ್ಯ
ಶ್ರೀ. ವೀರಭದ್ರಯ್ಯ
ಶ್ರೀ. ನರಸಿಂಹಲು (ಅಂಧ ಕಲಾವಿದ)
ಶ್ರೀ. ಬಸವರಾಜ ಸಂಗಪ್ಪ ಹಾರಿವಾಳ
ಶ್ರೀಮತಿ ಎಸ್.ಜಿ. ಲಕ್ಷ್ಮೀದೇವಮ್ಮ
ಶ್ರೀ. ಪಿಚ್ಚಳ್ಳಿ ಶ್ರೀನಿವಾಸ
ಶ್ರೀ. ಲೋಕಯ್ಯ ಶೇರ (ಭೂತಾರಾಧನೆ)
ಚಲನಚಿತ್ರ-ಕಿರುತೆರೆ
ಶ್ರೀಮತಿ ಹೇಮಾ ಚೌಧರಿ
ಶ್ರೀ. ಎಂ ಎಸ್ ನರಸಿಂಹಮೂರ್ತಿ
ಸಂಗೀತ ಕ್ಷೇತ್ರ
ಶ್ರೀ. ಪಿ ರಾಜಗೋಪಾಲ
ಶ್ರೀ. ಎ ಎನ್ ಸದಾಶಿವಪ್ಪ
ನೃತ್ಯ:
ಶ್ರೀಮತಿ ವಿದುಷಿ ಲಲಿತಾ ರಾವ್,
ಆಡಳಿತ ಕ್ಷೇತ್ರ:
ಶ್ರೀ. ಎಸ್ ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ)
ವೈದ್ಯಕೀಯ ಕ್ಷೇತ್ರ:
ಡಾ ಜೆಬಿ ಬಿಡನಹಾಳ,
ಡಾ ಮೈಸೂರು ಸತ್ಯಾನಾರಾಯಣ.
ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ
ಸಮಾಜ ಸೇವೆ:
ಶ್ರೀ.ವೀರಸಂಗಯ್ಯ,
ಶ್ರೀ.ಹೀರಾಚಂದ್ ವಾಗ್ಮರೆ,
ಶ್ರೀಮತಿ ಮಲ್ಲಮ್ಮ ಸೂಲಗಿತ್ತಿ,
ಶ್ರೀ.ದಿಲೀಪ್ ಕುಮಾರ್.
ಸಂಕೀರ್ಣ ಕ್ಷೇತ್ರ:
ಶ್ರೀ.ಹುಲಿಕಲ್ ನಟರಾಜ್,
ಡಾ. ಹೆಚ್ ಆರ್ ಸ್ವಾಮಿ,
ಶ್ರೀ. ಆ ನ ಪ್ರಹ್ಲಾದ ರಾವ್,
ಶ್ರೀ.ಕೆ ಅಜಿತ್ ಕುಮಾರ್ ರೈ,
ಶ್ರೀ. ಇರ್ಫಾನ್ ರಜಾಕ್, (ವಾಸ್ತು ಶಿಲ್ಪ)
ಶ್ರೀ.ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರ,
ಹೊರದೇಶ-ಹೊರನಾಡು:
ಶ್ರೀ.ಕನ್ನಯ್ಯ ನಾಯ್ಡು,
ಡಾ. ತುಂಬೆ ಮೊಹಿಯುದ್ದೀನ್,
ಶ್ರೀ.ಚಂದ್ರಶೇಖರ್ ನಾಯಕ್
ಪರಿಸರ:
ಶ್ರೀಮತಿ ಆಲ್ಮಿತ್ರಾ ಪಟೇಲ್
ಕೃಷಿ:
ಶ್ರೀ. ಶಿವನಾಪುರ ರಮೇಶ,
ಶ್ರೀಮತಿ ಪುಟ್ಟೀರಮ್ಮ
ಮಾಧ್ಯಮ:
ಶ್ರೀ. ಎನ್.ಎಸ್. ಶಂಕರ್,
ಶ್ರೀ. ಸನತ್ ಕುಮಾರ್ ಬೆಳಗಲಿ,
ಶ್ರೀ. ಎ.ಜಿ. ಕಾರಟಗಿ (ಅಮರ ಗುಂಡಪ್ಪ ಕಾರಟಗಿ),
ಶ್ರೀ. ರಾಮಕೃಷ್ಣ ಬಡಶೇಶಿ
ಶಿಲ್ಪಕಲೆ ಕ್ಷೇತ್ರ:
ಶ್ರೀ ಬಸವರಾಜ್ ಬಡಿಗೇರ
ಶ್ರೀ. ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ)
ವಿಜ್ಞಾನ-ತಂತ್ರಜ್ಞಾನ:
ಪ್ರೊ. ಟಿ.ವಿ. ರಾಮಚಂದ್ರ,
ಶ್ರೀ. ಸುಬ್ಬಯ್ಯ ಅರುಣನ್
ಸಹಕಾರ:
ಶ್ರೀ. ವಿರೂಪಾಕ್ಷಪ್ಪ ನೇಕಾರ
ಯಕ್ಷಗಾನ :
ಶ್ರೀ.ಕೇಶವ್ ಹೆಗಡೆ,
ಶ್ರೀ.ಸೀತಾರಾಮ ತೋಳ್ಪಾಡಿ
ಬಯಲಾಟ:
ಶ್ರೀ. ಸಿದ್ಧಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದರು),
ಶ್ರೀ. ನಾರಾಯಣಪ್ಪ ಶಿಳ್ಳೇಕ್ಯಾತ
ರಂಗಭೂಮಿ:
ಶ್ರೀಮತಿ ಸರಸ್ವತಿ ಜುಲೈಕ ಬೇಗಂ,
ಶ್ರೀ.ಓಬಳೇಶ್ ಹೆಚ್.ಬಿ.,
ಶ್ರೀಮತಿ ಭಾಗ್ಯಶ್ರೀ ರವಿ,
ಶ್ರೀ ಡಿ. ರಾಮು,
ಶ್ರೀ ಜನಾರ್ಧನ್ ಹೆಚ್.,
ಶ್ರೀ ಹನುಮಾನದಾಸ ವ. ಪವಾರ.
ಸಾಹಿತ್ಯ:
ಶ್ರೀಮತಿ ಬಿ.ಟಿ. ಲಿಲಿತಾ ನಾಯಕ್ ,
ಶ್ರೀ. ಅಲ್ಲಮಪ್ರಭು ಬೆಟ್ಟದೂರು.
ಡಾ. ಎಂ. ವೀರಪ್ಪ ಮೊಯಿಲಿ.
ಶ್ರೀ. ಹನುಮಂತರಾವ್ ದೊಡ್ಡಮನಿ,
ಡಾ. ಬಾಳಾಸಾಹೇಬ್ ಲೋಕಾಪುರ,
ಶ್ರೀ. ಬೈರಮಂಗಲ ರಾಮೇಗೌಡ.
ಡಾ. ಪ್ರಶಾಂತ್ ಮಾಡ್ತಾ
ಶಿಕ್ಷಣ:
ಡಾ. ವಿ. ಕಮಲಮ್ಮ,
ಡಾ. ರಾಜೇಂದ್ರ ಶೆಟ್ಟಿ.,
ಡಾ. ಪದ್ಮಾ ಶೇಖರ್
ಕ್ರೀಡೆ:
ಶ್ರೀ. ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್,
ಶ್ರೀ. ಗೌತಮ್ ವರ್ಮ,
ಶ್ರೀಮತಿ ಆರ್. ಉಮಾದೇವಿ
ನ್ಯಾಯಾಂಗ:
ಶ್ರೀ. ಬಾಲನ್
ಚಿತ್ರಕಲೆ:
ಶ್ರೀ ಪ್ರಭು ಹರಸೂರು
ಕರಕುಶಲ:
ಶ್ರೀ. ಚಂದ್ರಶೇಖರ ಸಿರಿವಂತೆ