ಬೆಂಗಳೂರು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ತಂಡ ಇದೀಗ ಕಾನೂನು ಕುಣಿಕೆಯೊಳಗೆ ಸಿಲುಕಿದೆ.
ಈ ಸಿನಿಮಾ ತಂಡ ಬೆಂಗಳೂರಿನ ಜಾರಕ ಬಂಡೆ ಕಾವಲು ಪ್ರದೇಶದ ಹೆಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಚಿತ್ರೀಕರಣಕ್ಕಾಗಿ ಬೃಹತ್ ಹಾಕಿತ್ತು. ಈ ಸೆಟ್ ಹಾಕಲು ಅರಣ್ಯ ಪ್ರದೇಶದಲ್ಲಿನ ನೂರಾರು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ತಕ್ಷಣವೇ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಿನಿಮಾದ ಸೆಟ್ ಹಾಕಲು ಮರಗಳನ್ನು ಕಡಿದಿರುವ ಅಂಶ ಪತ್ತೆಯಾಗಿತ್ತು ತಕ್ಷಣವೇ ಅವರು ಸಿನಿಮಾ ತಂಡದ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದರು ಅಲ್ಲದೆ ಅರಣ್ಯ ಭೂಮಿಯಲ್ಲಿ ಸಿನಿಮಾ ಶೂಟಿಂಗ್ ಮಾಡಲು ಅವಕಾಶ ನೀಡಿದ ಅಧಿಕಾರಿಯ ವಿರುದ್ಧವು ಕ್ರಮಕ್ಕೆ ಸೂಚಿಸಿದ್ದರು.
ಆ ಬಳಿಕ ಎಚ್ಎಂಟಿ ಅಧಿಕಾರಿಗಳು ಇದು ತಮ್ಮ ವಶದಲ್ಲಿ ಇರುವ ಜಮೀನು ಅಲ್ಲ ಎಂದು ಸ್ಪಷ್ಟನೆ ನೀಡಿದರೆ ಕೆನರಾ ಬ್ಯಾಂಕ್ ಸಿನಿಮಾ ಶೂಟಿಂಗ್ ಗೆ ನೀಡಿದ ಜಾಗ ತಮ್ಮ ಒಡತನಕ್ಕೆ ಸೇರಿದೆ ಎಂದು ಹೇಳಿತ್ತು.
ಇದಾದ ನಂತರ ಸಚಿವರು ಜಾಗದ ಒಡೆತನದ ಬಗ್ಗೆ ದಾಖಲೆ ಪರಿಶೀಲಿಸಲು ಸೂಚಿಸಿದ್ದರು ಈ ವೇಳೆ ಶೂಟಿಂಗ್ ಉದ್ದೇಶಕ್ಕೆ ನೀಡಿದ ಜಾಗವನ್ನು ಕೆನರಾ ಬ್ಯಾಂಕ್ ಅತಿಕ್ರಮಣ ಮಾಡಿರುವ ಮಾಹಿತಿ ಲಭ್ಯವಾಗಿತ್ತು ಈ ಹಿನ್ನೆಲೆಯಲ್ಲಿ ಇಡೀ ಘಟನೆಯನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದು ಇದೀಗ ನ್ಯಾಯಾಲಯದ ಆದೇಶದಂತೆ ಟಾಕ್ಸಿಕ್ ಸಿನಿಮಾ ತಂಡ, ಕೆನರಾ ಬ್ಯಾಂಕ್ ಮತ್ತು ಎಚ್ ಎಂ ಟಿ ಉನ್ನತ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.