ಬೆಳಗಾವಿ.
ಕುಂದಾ ನಗರಿ ಬೆಳಗಾವಿ ರಾಜಕಾರಣದಲ್ಲಿ ಇದೀಗ ಸಾಹುಕಾರ್ ದ್ದೇ ಪ್ರಾಬಲ್ಯ. ಬೆಳಗಾವಿ ರಾಜಕಾರಣದಲ್ಲಿ ಸಾಹುಕಾರ್ ಎಂದೆ ಗುರುತಿಸಿ ಕೊಂಡಿರುವ ಸತೀಶ್ ಜಾರಕಿಹೊಳಿ ಎಲ್ಲ ಪಕ್ಷಗಳ ಮೇಲೂ ತಮ್ಮ ಹಿಡಿತ ಹೊಂದಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಕೃಪಾಶೀರ್ವಾದ ಇಲ್ಲದೆ ಇಲ್ಲಿನ ಯಾವುದೇ ರಾಜಕೀಯ ನಾಯಕರು ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ ಅದರಲ್ಲೂ ರಾಜ್ಯ ಸರ್ಕಾರದಲ್ಲಿ ಇವರು ಪ್ರಭಾವಿ ಮಂತ್ರಿ ಆದ ನಂತರ ಬೆಳಗಾವಿ ರಾಜಕಾರಣ ಸಂಪೂರ್ಣ ಇವರ ನಿಯಂತ್ರಣಕ್ಕೆ ಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಶಾಸಕ ಅಥವಾ ಮಂತ್ರಿ ಆಗುವುದಕ್ಕಿಂತಲೂ ಸಹಕಾರಿ ಬ್ಯಾಂಕ್ ಅಧ್ಯಕ್ಷನಾಗುವುದು ಅತ್ಯಂತ ಪ್ರತಿಷ್ಠಿತ ವಿಷಯ ಎಂಬಂತಾಗಿದೆ ಇಂತಹ ಪ್ರತಿಷ್ಠೆಯ ಕಾರಣಕ್ಕಾಗಿ ಈ ಹಿಂದಿನ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಹೊಂದಿತ್ತು.
ಮೊನ್ನೆಯಷ್ಟೇ ಸಹಕಾರ ಬ್ಯಾಂಕ್ ರಾಜಕಾರಣ ತೀವ್ರ ಸ್ವರೂಪ ಪಡೆದುಕೊಂಡು ಬಿಜೆಪಿ ನಾಯಕತ್ವದ ವಿರುದ್ಧ ಮಾಜಿ ಸಂಸದ ರಮೇಶ್ ಕತ್ತಿ ಕಿಡಿಕಾರಿದ್ದರು. ಅಷ್ಟೇ ಅಲ್ಲ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ ಸಲ್ಲಿಸಿದ್ದರು.ಇವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಈಗ ಚುನಾವಣೆ ನಡೆದಿದೆ.
ಸಚಿವ ಸತೀಶ್ ಜಾರಕಿಹೊಳಿ ರವರ ರಾಜಕೀಯ ಜಾಣ್ಮೆ ಹಾಗೂ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ತೀವ್ರ ಸ್ವರೂಪದ ಭಿನ್ನಮತದ ಪರಿಣಾಮವಾಗಿ
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಗಾಧಿಗೆ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಸದಸ್ಯರ ಬಲ ಹೊಂದಿದ್ದ ಬಿಜೆಪಿ ಪಕ್ಷ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮತ್ತೆ ಕಿಂಗ್ ಮೇಕರ್ ಆಗಿದ್ದಾರೆ. ಆ ಮೂಲಕ ತಮ್ಮ ಶಕ್ತಿ ಏನೆಂಬುದನ್ನು ಅವರು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.
ಸಹಕಾರ ಬ್ಯಾಂಕ್ ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ
ಬಿಜೆಪಿ ಬೆಂಬಲಿತ ನಿರ್ದೇಶಕರಿದ್ದರೂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕನ ಪಾಲಾಗಿದೆ. ಸತೀಶ್ ಜಾರಕಿಹೊಳಿ ಅವರ ಆಪ್ತ ಅಪ್ಪಾಸಾಹೇಬ್ ಕುಲಗೋಡೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Previous Articleಬಂಧನ ಭೀತಿಯಲ್ಲಿ ರಾಮ್ ಗೋಪಾಲ್ ವರ್ಮ.
Next Article ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ್ದು ಯಾರು ಗೊತ್ತಾ.