ಮೈಸೂರು.
ವಿಧಾನಸಭೆಯ ಉಪElection ಹಿನ್ನಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಕರಿಯ ಮತ್ತು ಕುಳ್ಳ ಎಂಬ ಶಬ್ದಗಳು ಸಾಕಷ್ಟು ಸಂಚಲನ ಸೃಷ್ಟಿಸಿವೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಅತ್ಯಂತ ಆಪ್ತರು ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದು ಪ್ರೀತಿಯಿಂದ ಅವರನ್ನು ನಾನು ಕರಿಯ ಎನ್ನುತ್ತಿದ್ದೆ, ಅದಕ್ಕೆ ಪ್ರತಿಯಾಗಿ ಅವರು ನನಗೆ ಕುಳ್ಳ ಎನ್ನುತ್ತಿದ್ದರು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಈ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು ಕರಿಯ ಮತ್ತು ಕುಳ್ಳ ಸಂಸ್ಕೃತಿ ನಮ್ಮದಲ್ಲ ನಾನೆಂದಿಗೂ ಆ ರೀತಿ ಮಾತನಾಡಿಲ್ಲ ಅವರಿಗೆ ದುಡ್ಡಿನ ಮದ ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿ ಕರೆಯುತ್ತಾರೆ.
ಚಾಮುಂಡಿ ತಾಯಿಯ ಮುಂದೆ ನಿಂತು ಹೇಳುತ್ತಿದ್ದೇನೆ ಹಿರಿಯ ನಾಯಕ ಬಸವರಾಜ ಹೊರಟಿ ಒಮ್ಮೆ ನನ್ನನ್ನು ಕುಮಾರ ಎಂದು ಕರೆದಾಗ ಜಮೀರ್ ಅಹ್ಮದ್ ಖಾನ್ ಅವರನ್ನು ಹೊಡೆಯಲು ಹೋಗಿದ್ದರು ಅಂತಹ ಗಿರಾಕಿ ಈತ.ನಿಮಗೆ ಜಮೀರ್ ಅಹ್ಮದ್ ಖಾನ್ ಒಡೆಯಲು ಬಂದಿರಲಿಲ್ಲವೇ ಎಂದು
ಹೊರಟ್ಟಿ ಅವರನ್ನು ಕೇಳಬಹುದು ಎಂದು ಹೇಳಿದರು.
ರಾಜಕೀಯವಾಗಿ ನಾವಿಬ್ಬರೂ ಸ್ನೇಹಿತರಾಗಿ ಇದ್ದಿದ್ದು ನಿಜ ಆದರೆ ಆ ಸ್ನೇಹ ಎಂದಿಗೂ ಕರಿಯ, ಕುಳ್ಳ ಎಂದು ಕರೆಯುವಷ್ಟರ ಮಟ್ಟಿಗೆ ಇರಲಿಲ್ಲ. ಕೇಂದ್ರ ಮಂತ್ರಿಯಾದವರ ಬಗ್ಗೆ ಇಂತಹ ಮಾತುಗಳನ್ನು ಹೇಳಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಗೆ ಸಹಿಸಿದ್ದಾರೆ ಬೇರೆ ಯಾರಾದರೂ ಹೀಗೆ ಮಾತನಾಡಿದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಜೈಲಿಗೆ ತಳ್ಳುತ್ತಿದ್ದರು ಎಂದು ಕಿಡಿ ಕಾರಿದರು
Previous Articleಅಶೋಕ್ ಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಇನ್ಸ್ ಪೆಕ್ಟರ್ ಸಹಕಾರ.
Next Article ಐಪಿಎಸ್ ಅಧಿಕಾರಿಗಳಿಗೂ ವಂಚಕರ ಕಾಟ.