ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಸಮಗ್ರ ಬೇಸಾಯ, ಡಿಜಿಟಲ್ ಕೃಷಿ, ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳು, ಸಿರಿ ಧಾನ್ಯ ಮತ್ತು ಅವುಗಳ ಮಹತ್ವ, ಕೃಷಿ ಸ್ವಯಂ ಚಾಲಿತ ತಂತ್ರಜ್ಞಾನ ಹೀಗೆ ಹತ್ತು ಹಲವು ಪ್ರಾತ್ಯಕ್ಷಿಕೆಗಳು ಈ ಬಾರಿಯ ಕೃಷಿ ಮೇಳದ ಆಕರ್ಷಣೆಯಾಗಿವೆ.
ರಾಜ್ಯದ ಕೃಷಿ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಕ್ಯಾಂಪಸ್‌ಗೆ ಎಸ್. ನಿಜಲಿಂಗಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 1300 ಎಕರೆ ಮಂಜೂರು ಮಾಡಿತ್ತು.
ಅಂದಿನ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿ ಅವರು ಜಿಕೆವಿಕೆ ಕ್ಯಾಂಪಸ್ ಉದ್ಘಾಟಿಸಿದ್ದರು.