ಬಾಂಗ್ಲಾದೇಶದ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್ (ISKCON) ನ ಮಾಜಿ ಮುಖ್ಯಸ್ಥರ ಮೇಲೆ ಸೋಮವಾರ ದೇಶದ್ರೋಹದ ಆರೋಪ ಹೊರಿಸಲಾಗಿದ್ದು, ಈ ಘಟನೆಯನ್ನು “ದುರದೃಷ್ಟಕರ” ಎಂದು ಬಣ್ಣಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ವಿಚಾರದ್ಲಲಿ ಭಾರತ ಮಧ್ಯಪ್ರವೇಶ ಮಾಡಲಿದೆ ಎಂದು ಹೇಳಿದೆ.
ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಸುರಕ್ಷತೆಯನ್ನು ಬಾಂಗ್ಲಾದೇಶ ಖಾತ್ರಿಪಡಿಸಬೇಕೆಂದು ನವದೆಹಲಿ ಒತ್ತಾಯಿಸಿದ್ದರೂ, ಧಾರ್ಮಿಕ ನಾಯಕನ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಬಾಂಗ್ಲಾ ಪೊಲೀಸರು ಮಾಹಿತಿ ನೀಡಿದ್ದಾರೆ.
“ನ್ಯಾಯಾಲಯದ ಹೊರಗೆ (ಚಿತ್ತಗಾಂಗ್ನಲ್ಲಿ) ನಡೆದ ಪ್ರತಿಭಟನೆಯಲ್ಲಿ ದಾಸ್ ಅವರನ್ನು ಸಮರ್ಥಿಸಿದ ಮುಸ್ಲಿಂ ವಕೀಲರೊಬ್ಬರು ಪೊಲೀಸ್ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು” ಎಂದು ಪೊಲೀಸ್ ಅಧಿಕಾರಿ ಲಿಯಾಕತ್ ಅಲಿ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
Previous Articleಶಬರಿಮಲೈನಲ್ಲಿ ಪೊಲೀಸರ ಅವಾಂತರ.
Next Article ಫೆಂಗಲ್ ಚಂಡಮಾರುತದ ಅಟ್ಟಹಾಸ ಆರಂಭ