ಬೆಂಗಳೂರು,ಡಿ.5-
ಕೊಲೆ ಆರೋಪ ಪ್ರಕರಣದಲ್ಲಿ ಬಂಧಿತನಾದ ಆರೋಪಿಯನ್ನು ಸರಿಯಾಗಿ ವಿಚಾರಣೆ ನಡೆಸದೆ ಕೈಬಿಟ್ಟಿರುವ ಆರೋಪ ಸಂಬಂಧ ರಾಮಮೂರ್ತಿ ನಗರ ಠಾಣೆ ಇನ್‌ಸ್ಪೆಕ್ಟರ್ ಸೇರಿದಂತೆ 6 ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕೊಲೆ ಆರೋಪದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಬಂಧಿಸಲು ಹೋದಾಗ ಆತ ಅಮಲಿನಲ್ಲಿ
ಪೊಲೀಸರ ಮೇಲೆ ಹಲ್ಲೆ ಮಾಡಿದ್ದ.ಗಾಂಜಾ ಮಾರಾಟ ಸೇರಿದಂತೆ ಹಲವು ಆರೋಪಗಳಲ್ಲಿ ಬೇಕಾಗಿದ್ದ ಈತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದಿದ್ದರು.
ಠಾಣೆಯಲ್ಲಿ ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸದೆ ಆರೋಪಿಯನ್ನು ಹಣ ಪಡೆದು ಯಾವುದೇ ದೂರು ದಾಖಲಿಸದೇ ಇದ್ದ ಆರೋಪ ಕೇಳಿಬಂದಿತ್ತು.
ಈ ಕುರಿತು ಠಾಣೆಯ ಇನ್‌ಸ್ಪೆಕ್ಟರ್ ವಿರುದ್ಧ Bengaluru ನಗರ ಕಮಿಷನರ್ ದಯಾನಂದ್‌ಗೆ ರಾಮಮೂರ್ತಿನಗರ ಠಾಣೆ ಸಿಬ್ಬಂದಿ ಪತ್ರ ಬರೆದಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಅವರು ಈ ಸಂಬಂಧ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಕಮಿಷನರ್ ಸತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದರು.
ಸತೀಶ್ ಕುಮಾರ್ ಅವರು ಎಲ್ಲರನ್ನೂ ವಿಚಾರಣೆ ನಡೆಸಿದಾಗ ಆರೋಪದಲ್ಲಿ ಸತ್ಯಾಂಶ ಕಂಡು ಬಂದಿದೆ ಎಂದು ವರದಿ ನೀಡಿದ್ದರು.ಈ ಹಿನ್ನೆಲೆಯಲ್ಲಿ
ಠಾಣೆಯ ಇನ್‌ಸ್ಪೆಕ್ಟರ್ ಮುತ್ತುರಾಜ್, ಪಿಎಸ್ಐ ಉಮೇಶ್, ಎಎಸ್ಐ ಮಹೇಶ್ ಹಾಗೂ ಪೈರೋಜ್ ಖಾನ್, ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್, ಕಾನ್‌ಸ್ಟೇಬಲ್ ಬಸವರಾಜ್ ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.
Previous Articleಗಂಡಾಂತರಕ್ಕೆ ಸಿಲುಕಿದ ಸಿದ್ದರಾಮಯ್ಯ.
Next Article ಆನೆ ಹಾವಳಿ ತಡೆಗೆ ತಮಿಳುನಾಡು ಮಾದರಿ