ನನ್ನ ಅತ್ಯಂತ ಇಷ್ಟದ ಖಾದ್ಯ ಮಟನ್ ಕರಿ ಎಂದು ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ಟೆಂಡೂಲ್ಕರ್ ಹೇಳಿಕ್ಕರೆ. ತಮ್ಮ ಪ್ರೀತಿಯ ಕ್ರಿಕೆಟ್ ಗುರು ರಮಾಕಾಂತ್ ಅಚ್ರೆಕಾರ್ ಅವರ ಸ್ಮರಣಾರ್ಥ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿನ್ ಅವರು ಆಚರೆಕರ್ ಅವರೊಂದಿಗಿನ ತಮ್ಮ ಬಾಂಧವ್ಯದ ಕೆಲವು ನೆನಪಿನ ಮುತ್ತುಗಳನ್ನು ಸಭಿಕರಿಗೆ ನೀಡಿದರು. ‘ನಾವು ಆಚರೆಕರ್ ಅವರ ಮನೆಗೆ ಹೋಗುತ್ತಿದ್ದೆವು ಅಲ್ಲಿ ನಾವು ನಮಗೆ ಪ್ರಿಯವಾದ ಮಟನ್ ಕರಿ ಮತ್ತು ಪಾವ್ ಅನ್ನು ನಿಂಬೆ ಮತ್ತು ಈರೊಳ್ಳಿಯೊಂದಿಗೆ ತಿನ್ನುತ್ತಿದ್ದೆವು ಎಂದು ಸಂತೋಷದಿಂದ ಹೇಳಿದ್ದಾರೆ. ಸಚಿನ್ ಅವರಿಗೆ ಊಟದಲ್ಲಿ ಏನು ಬಹಳ ಇಷ್ಟ ಎಂದು ಯೋಚಿಸುತ್ತಿದ್ದವರಿಗೆ ಈಗ ಅವರೇ ಸುಳಿವು ನೀಡಿದಂತಿದೆ. ಈ ಕಾರ್ಯಕ್ರಮದಲ್ಲಿ ಸಚಿನ್ ಅವರ ಕ್ರಿಕೆಟ್ ಆಟದಲ್ಲಿ ಆರಂಭದ ಗೆಳೆಯ ವಿನೋದ್ ಕಾಂಬ್ಳಿಯವರೂ ಭಾಗವಹಿಸಿದ್ದರು.