ಬೆಳಗಾವಿ,ಡಿ.13-ದೇಶದಲ್ಲಿ ಚರ್ಚೆ ಮಾಡಬೇಕಾದ ವಿಷಯಗಳು ಸಾಕಷ್ಟಿದ್ದರೂ ಅದನ್ನು ಬಿಟ್ಟು ಜನರ ಗಮನ ಬೇರೆಡೆ ಸೆಳೆಯಲು ಒಂದು ದೇಶ ಒಂದು Election ವಿಷಯ ತಂದಿದ್ದಾರೆ ಎಂದು ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಸುವರ್ಣಸೌಧದದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ನಮ್ಮ ದೇಶದ ರುಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಅದಾನಿ ಪ್ರಕರಣ ಬಗ್ಗೆ ಚರ್ಚೆ ಮಾಡಲು ತಯಾರಿಲ್ಲ. ಆದರೆ ಜನರ ಗಮನ ಬೇರೆಡೆ ಸೆಳೆಯಲು ಇಂಥ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಲ್ ತರುವ ಮೊದಲು ಸಂವಿಧಾನದಲ್ಲಿ ಕೆಲವು ತಿದ್ದುಪಡಿ ತರಬೇಕಾಗುತ್ತೆ. ಮೆನ್ ಅಂಡ್ ಮಿಷನರಿ ಏನು ಬೇಕು? ತಾಂತ್ರಿಕವಾಗಿ ಸಿದ್ದರಿದ್ದೀರಾ? ಮಾನವ ಸಂಪನ್ಮೂಲ ಇದೆಯಾ? ಇದನ್ನೆಲ್ಲಾ ನೋಡಬೇಕಾಗಲಿದೆ,. ರಾತ್ರಿ ಮೋದಿ ಕನಸು ಕಂಡು ಅದನ್ನು ನನಸು ಮಾಡಲು ಹೊರಟರೆ, ಬಿಜೆಪಿ ಸಚಿವರೆಲ್ಲ ವಾವ್ ಮೋದಿಜಿ ಮೋದೀಜಿ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿಯವರ ಆಡಳಿತ ವೈಫಲ್ಯ, ಅದಾನಿ ಪ್ರಕರಣ ಮುಚ್ಚಿಹಾಕಲು ಇಂತಹ ಪ್ರಯೋಗ ಮಾಡಲಿದ್ದಾರೆ,. ಇದೆಲ್ಲ ಅದಾನಿಯನ್ನ ಉಳಿಸಲು ಮಾಡುತ್ತಾರೋ ತಂತ್ರವಲ್ಲದೇ ಮತ್ತೇನೂ ಅಲ್ಲ ಎಂದರು. ಇದೇ ವೇಳೆ ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ವರ್ಕರ್ಸ್ ಬಿಲ್ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕಾರ್ಮಿಕರ ಸಾಮಾಜಿಕ ಆರ್ಥಿಕ ಭದ್ರತೆಗೆ ಸರ್ಕಾರ ಬದ್ಧವಾಗಿದೆ. ಇಂಡಸ್ಟ್ರಿ ಹಾಗೂ ಕಾರ್ಮಿಕರಿಗೆ ತೊಂದರೆಯಾಗದಂತೆ ವಿಧೇಯಕ ತರಲಿದ್ದೇವೆ ಎಂದು ಭರವಸೆ ನೀಡಿದರು.
ಇನ್ನು ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ ಬಿಲ್ ವಿಚಾರವಾಗ ಪ್ರತಿಕ್ರಿಯಿಸಿದ ಸಚಿರು, ಗುಜರಾತ್ ಯುನಿವರ್ಸಿಟಿ ಬಿಲ್ ಏನಿದೆ ಗೊತ್ತಾ? ಮಾತೆತ್ತಿದರೆ ಬಿಜೆಪಿಯವರು ಗುಜರಾತ್ ಮಾದರಿ ಎನ್ನುತ್ತಾರೆ. ಆದರೆ ಗುಜರಾತ್ ನಲ್ಲಿ ಮೋದಿ ಎನ್ ಮಾಡಿದ್ದಾರೆ ಅನ್ನೋದು ಮೊದಲು ತಿಳಿದುಕೊಳ್ಳಲಿ. ನಮಗೆ ಗುಜರಾತ್ ಮಾಡೆಲ್ ಬೇಕಿಲ್ಲ. ನಮ್ಮ ಮಾಡೆಲ್ ನೇ ನೋಡಿ ಬೇರೆ ರಾಜ್ಯಗಳು ಕಲಿತಿವೆ. ಗುಜರಾತ್ ಮಾಡೆಲ್‌ನಲ್ಲಿ ಏನಿದೆ ಮಣ್ಣು ಎಂದು ಕಿಡಿಕಾರಿದರು
Previous Articleಜೈಲಿನಲ್ಲಿದ್ದ ಮಗನ ನೋಡಲು ಬಂದ ತಂದೆಗೆ ಆಗಿದ್ದೇನು.?
Next Article ಲಾಠಿ ಚಾರ್ಜ್ ಯಾಕೆ ಮಾಡಬೇಕಾಯಿತು ಎಂದ ಸಿಎಂ.