ಕೋಲಾರ : ರಾಜ್ಯದ ಬಹುತೇಕ ನಗರ ಸಭೆ ˌ ಪುರ ಸಭೆಗಳಲ್ಲಿ ಹಲವಾರು ವರುಷಗಳಿಂದಲೂ ಸೇವೆಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳವರ ಕಛೇರಿ ಮುಂದೆ ಪೌರ ಕಾರ್ಮಿಕರು ಒಂದು ದಿನದ ಪ್ರತಿಭಟನೆ ನಡೆಸಿದರು. ರಾಜ್ಯದಾದ್ಯಂತ ಇಂದು ರಾಜ್ಯ ಪೌರ ಕಾರ್ಮಿಕರ ಸಂಘವು ಕರೆ ನಿಡಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರ್ಮಿಕರು ಕಳೆದ ಮೂವತ್ತು ವರುಷಗಳಿಂದಲೂ ನಾವು ಸೇವೆ ಸಲ್ಲಿಸುತ್ತಿದ್ದರೂ ನಮಗೆ ಖಾಯಂಗೊಳಿಸಿಲ್ಲ. ಸಾಕಷ್ಟು ಕಾರ್ಮಿಕರು ಈಗಾಗಲೇ ಸಾವನ್ನಪ್ಪಿದ್ದಾರೆಂದೂ ಇರುವಷ್ಟು ಮಂದಿ ಪೌರ ಕಾರ್ಮಿಕರನ್ನಾದರೂ ಖಾಯಂ ಗೊಳಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.