ಇದು ನಿಮಗೆ ತಿಳಿದಿರಲಿ
ಬಾಯಲ್ಲಿ ಆಹಾರವಿದ್ದಾಗ ಮಾತನಾಡಬೇಡಿ. ಮಾತನಾಡಲೇ ಬೇಕೆಂದರೆ ಬಾಯಿಯನ್ನು ಕೈಯಿಂದ ಮುಚ್ಚಿಕೊಳ್ಳಿ. ಬಾಯಲ್ಲಿ ಆಹಾರವಿದ್ದಾಗ ಮಾತಾಡಿದರೆ ಬಾಯಲ್ಲಿರುವ ಆಹಾರದ ಸಣ್ಣ ತುಣುಕುಗಳು ಬೇರೆಯವರ ಮೇಲೆ ಬೀಳಬಹುದು ಇಲ್ಲ ಬೇರೆಯವರು ತಿನ್ನುವ ಆಹಾರದಲ್ಲಿ ಬಿದ್ದು ಅವರಿಗೆ ಅಸಹ್ಯವಾಗಬಹುದು.
ಊಟ ಮಾಡುವಾಗ ತೇಗಬೇಡಿ. ತೇಗುವುದು ತೃಪ್ತಿಯ ಸಂಕೇತವೆಂದು ಜನ ಹೇಳಿದರೂ ನಿಮ್ಮ ತೇಗು ನಿಮ್ಮ ಹೊಟ್ಟೆಯಿಂದ ಬಂದ ವಾಯುವನ್ನು ನೀವು ಬಾಯಿಯ ಮೂಲಕ ಹೊರಗೆ ಬಿಡುವುದು ಆಗಿರುತ್ತದೆ. ಬೇರೆಯವರು ತಮ್ಮ ಬಾಯಿಯ ಒಳಗೆ ಆಹಾರ ಹಾಕುತ್ತಿರುವಾಗ ನಿಮ್ಮ ಹೊಟ್ಟೆಯೊಳಗಿನಿಂದ ಬಾಯಿಯ ಮೂಲಕ ಹೊರಬಂದ ವಾಯು ಅವರ ಮೂಗು ತಲುಪಿದರೆ ಅದು ಅವರಿಗೆ ಖಂಡಿತ ತೃಪ್ತಿ ಕೊಡುವುದಿಲ್ಲ. ಅದರ ಬದಲಾಗಿ ನಿಮ್ಮ ಬಗ್ಗೆ ಅವರಿಗೆ ಜಿಗುಪ್ಸೆ ಮೂಡಬಹುದು. ಊಟ ಮಾಡುವಾಗ ಟೇಬಲ್ ಮೇಲೆ ಇಟ್ಟಿರುವ ಆಹಾರ ಪದಾರ್ಥಗಳನ್ನು ಕೈಯಿಂದ ಮುಟ್ಟಬೇಡಿ. ನಿಮಗೆ ಗೊತ್ತಿಲ್ಲದೆಯೇ ನೀವು ನಿಮ್ಮ ಮುಖ ಅಥವಾ ಮೂಗು ಕಿವಿಯನ್ನು ಮುಟ್ಟಿಕೊಂಡಿರಬಹುದು ಅದನ್ನು ನೋಡಿದವರು ನೀವು ಅದೇ ಕೈಯಲ್ಲಿ ಆಹಾರ ಮುಟ್ಟಿದ್ದನ್ನು ನೋಡಿದರೆ ಆ ಆಹಾರವನ್ನು ಅವರು ಮುಟ್ಟದಿರಬಹುದು. ನೀವು ಊಟ ಮಾಡುವ ರೀತಿ ನಿಮ್ಮೊಂದಿಗೆ ಊಟ ಮಾಡುವವರಿಗೆ ನೀವು ಕೊಡುವ ಗೌರವವೆಂದು ಮರೆಯಬೇಡಿ.
Previous Articleಬಿಜೆಪಿ ನಾಯಕರಿಗೆ ಪ್ರಿಯಾಂಕ ಖರ್ಗೆ ಪ್ರಶ್ನೆ ?
Next Article ಇವನೆಂಥಾ ಡಾಕ್ಟರ್ ನೋಡಿ…!