ಬೆಂಗಳೂರು,ಮಾ.2-
ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮೌದ್ಗೀಲ್ ಅವರ ಗ್ರಹಚಾರ ಸರಿಯಿಲ್ಲ ಎಂದು ಕಾಣುತ್ತಿದೆ. ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕುವ ಅವರು ಇದೀಗ ಕಳ್ಳತನ ಆರೋಪದಲ್ಲಿ ಸಿಲುಕಿದ್ದಾರೆ.
ಸದ್ಯ ರಾಜ್ಯ ಪೊಲೀಸ್ ಅಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿರುವ ಡಿ. ರೂಪಾ ವಿರುದ್ಧ ದಾಖಲೆ ಕಳವು ಮಾಡಿರುವ ಆರೋಪ ಮಾಡಿ ಡಿಐಜಿ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಹಿರಿಯ ಅಧಿಕಾರಿಗಳ ಮುಂದೆಯೇ ಗಲಾಟೆ ಮಾಡಿಕೊಂಡಿದ್ದ ಐಜಿಪಿ ರೂಪಾ ಮೌದ್ಗಿಲ್ ಮತ್ತು ಡಿಐಜಿ ವರ್ತಿಕಾ ಕಟಿಯಾರ್ ಇಬ್ಬರನ್ನು ಹಿರಿಯ ಅಧಿಕಾರಿಗಳು
ಸಮಾಧಾನ ಪಡಿಸಿದ್ದರು.
ಇದಾದ ನಂತರ ಎಲ್ಲವೂ ಬಗೆಹರಿದಿದೆ ಎಂದು ಕೊಂಡಿರುವಾಗ ಐಜಿಪಿ ರೂಪಾ ವಿರುದ್ಧ ಕಳ್ಳತನ ಆರೋಪ ಕೇಳಿ ಬಂದಿದೆ. ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿರುವ ವರ್ತಿಕಾ ಕಟಿಯಾರ್ ಅವರು ಐಜಿಪಿ ರೂಪಾ ನನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆ ಕಳವು ಮಾಡಿಸಿದ್ದಾರೆ. ಆ ದಾಖಲೆಗಳನ್ನು ನಕಲಿ ಮಾಡಿ ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ದೂರಿನಲ್ಲಿ ವರ್ತಿಕಾ ಕಟಿಯಾರ್ ಬರೆದಿರುವ ದೂರಿನಲ್ಲಿ ಕೆಳಹಂತದ ಮೂವರು ಅಧಿಕಾರಿಗಳಾದ ಮಲ್ಲಿಕಾರ್ಜುನ್, ಮಂಜುನಾಥ್ ಮತ್ತು ಕಿರಣ್ ಅವರನ್ನು ಬಳಸಿ ರೂಪಾ ಅವರು ದಾಖಲೆಗಳನ್ನ ಕಳವು ಮಾಡಿಸಿದ್ದಾರೆ.
ವಾಟ್ಸಪ್ ಮೂಲಕ ಫೋಟೋ ತೆಗೆಸಿದ್ದಾರೆ, ಕಂಟ್ರೋಲ್ ರೂಮ್‌ನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ. ದುರುದ್ದೇಶದಿಂದ ಫೋಟೋ ತೆಗೆಸಲಾಗಿದ್ದು, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.