ಬೆಂಗಳೂರು,ಏ.8-
ರೀಲ್ಸ್ ಸ್ಟಾರ್ ಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ತಮ್ಮ ತಮ್ಮ ಇನ್ಸ್ ಟಾಗ್ರಾಂ ಪೇಜ್‌ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧ ಜಾಹೀರಾತು ಬಿತ್ತರಿಸಿದ್ದಾರೆ.ಇದರಿಂದ ರೀಲ್ಸ್ ಸ್ಟಾರ್‌ಗಳಿಗೆ ಸಂಕಷ್ಟ ಎದುರಾಗಿದೆ
ಮಾನ್ಯತೆ ಪಡೆಯದ ಬೆಟ್ಟಿಂಗ್ ಆಪ್ ಬಗ್ಗೆ ಪ್ರಮೋಟ್ ಮಾಡಿದ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್‌ಗೌಡ ಸೇರಿ 100ಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳಿಗೆ ನೋಟೀಸ್ ನೀಡಿ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಇವರು ತಮ್ಮ ಪೇಜ್‌ಗಳಲ್ಲಿ ಬಿತ್ತರಿಸಿದ್ದ ಜಾಹೀರಾತುಗಳು ಜನರಿಗೆ ವಂಚಿಸುವ ಜಾಹೀರಾತುಗಳು ಆಗಿದ್ದವು
ಹಾಗಾಗಿ ವಕೀಲರೊಬ್ಬರು ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಜನರಿಗೆ ವಂಚಿಸುವ ಜಾಹೀರಾತು ಪ್ರಕಟಿಸಿದ್ದ ರೀಲ್ಸ್ ಸ್ಟಾರ್‌ಗಳ ಪಟ್ಟಿ ಮಾಡಿ ಸೈಬರ್ ಕ್ರೈಂ ಪೊಲೀಸರು ನೋಟಿಸ್ ನೀಡಿದ್ದರು.
ಸೋನು ಶ್ರೀನಿವಾಸ್‌ಗೌಡ, ದೀಪಕ್‌ಗೌಡ, ವರುಣ್ ಆರಾದ್ಯ, ದಚ್ಚು ಸೇರಿ ನೂರಕ್ಕು ಹೆಚ್ಚು ಮಂದಿ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ.
ವಿಚಾರಣೆಗೆ ಹಾಜರಾದ ಸ್ಟಾರ್‌ಗಳು ಇನ್ನು ಮುಂದೆ ಇಂತಹ ಜಾಹೀರಾತುಗಳನ್ನ ನಾವು ಪ್ರಕಟಿಸುವುದಿಲ್ಲ. ಈ ಜಾಹೀರಾತು ಪ್ರಕಟಿಸುವುದರಿಂದ ಜನರಿಗೆ ಸಮಸ್ಯೆ ಆಗುತ್ತದೆ ಎಂಬ ಅರಿವಿಲ್ಲದೇ ನಾವು ಪ್ರಕಟಿಸಿದ್ದೇವೆ. ನಾವು ಮಾಡಿದ್ದ ತಪ್ಪಿನ ಬಗ್ಗೆ ಅರಿವಿಗೆ ಬಂದಿದ್ದು, ಜಾಹೀರಾತುಗಳನ್ನ ಡಿಲೀಟ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಜನರಿಗೆ ವಂಚಿಸುವ ಜಾಹೀರಾತುಗಳು ಇನ್ನೊಮ್ಮೆ ಪ್ರಕಟಿಸಿದರೆ ಜೈಲಿಗೆ ಕಳಿಸುವ ಎಚ್ಚರಿಕೆಯನ್ನು ಸೈಬರ್ ಕ್ರೈಂ ಪೊಲೀಸರು ನೀಡಿದ್ದಾರೆ.