ಬೆಂಗಳೂರು,ಜು.3-
ದೇವಳ ನಗರಿ ಉಡುಪಿಯಲ್ಲಿ ಅಂತರಾಷ್ಟ್ರೀಯ ಡ್ರಗ್ ಸಾಗಾಣಿಕೆಯ ಕಾಲ್ ಸೆಂಟರ್ ಒಂದು ಕಾರ್ಯಾ ನಿರ್ವಹಿಸುತ್ತಿದುದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಉಡುಪಿಯಲ್ಲಿ ಕಾಲ್ ಸೆಂಟರ್ ತೆರೆದಿದ್ದ.ಇದನ್ನು ಬಳಸಿಕೊಂಡು ನವದೆಹಲಿ ಮೂಲಕ ನಾನಾ ರಾಷ್ಟ್ರಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಬೃಹತ್ ಜಾಲವನ್ನು ಭಾರತೀಯ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ ಪತ್ತೆ ಹಚ್ಚಿದೆ.
ಉಡುಪಿಯಲ್ಲಿ ಕಾಲ್ ಸೆಂಟರ್ ತೆರೆದು ಡ್ರಗ್ಸ್ ಗೆ ಬೇಡಿಕೆ ಪಡೆಯುತ್ತಿದ್ದ ತಮಿಳುನಾಡು ಮೂಲದ ಕಿಂಗ್ ಪಿನ್ ಬಂಧಿಸಿದ್ದಾನೆ.
ಈ ಕಾಲ್ ಸೆಂಟರ್ ಮೂಲಕ 10 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಬಂಧಿಸಿ, ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಸಿಬಿ ಸಹಿತ ತನಿಖಾ ಸಂಸ್ಥೆಗಳನ್ನು ಸಮನ್ವಯದಿಂದ ಜಾಗತಿಕ ಮಾದಕ ದ್ರವ್ಯ ಕಳ್ಳ ಸಾಗಣೆ ಜಾಲ ಬಯಲಿಗೆಳೆದಿದ್ದಕ್ಕಾಗಿ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಇಲಾಖೆ ಹಾಗೂ ಎನ್‌ಸಿಬಿ ಸಹಿತ ತನಿಖಾ ಸಂಸ್ಥೆಗಳು ಮಾದಕ ಜಾಲಗಳ ಮೇಲೆ ನಿಗಾ, ನಿರಂತರ ಮೇಲ್ವಿಚಾರಣೆ ಮಾಡುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತಿಯೊಂದು ಮಾದಕ ದ್ರವ್ಯ ಕಳ್ಳ ಸಾಗಣೆ ಜಾಲ ಮಟ್ಟಹಾಕಲು ಹಾಗೂ ಜಾಲದಲ್ಲಿ ಎಲ್ಲಿಂದಲಾದರೂ ಕಾರ್ಯನಿರ್ವಹಿಸುವ ಯುವಜನರನ್ನು ರಕ್ಷಿಸುವ ದೃಢ ನಿಶ್ಚಯ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈಗ ಪತ್ತೆ ಹಚ್ಚಲಾಗಿರುವ ಡ್ರಗ್ಸ್ ಮಾರಾಟ ಜಾಲ
ನಾಲ್ಕು ಖಂಡದ 10 ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುವ ಜಾಲದ ವಿರುದ್ಧ ಅಮೆರಿಕ, ಆಸ್ಟ್ರೇಲಿಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ ಸಾಕಾಣಿಕೆ ಜಾಲದಲ್ಲಿ ನಿರತವಾಗಿರುವ ಈ ವ್ಯವಸ್ಥಿತ ಸಂಸ್ಥೆ
ನವದೆಹಲಿ, ಜೈಪುರ, ಉಡುಪಿ, ರೂರ್ಕಿಯಲ್ಲಿ ಎಂಟು ಕಾಲ್ ಸೆಂಟರ್ ನಡೆಸುತ್ತಿತ್ತು.
ಉಡುಪಿಯ ಕಾಲ್ ಸೆಂಟರ್‌ನಲ್ಲಿ 10 ಮಂದಿಯನ್ನು ನೇಮಿಸಿಕೊಂಡು ನಾನಾ ದೇಶಗಳಿಂದ ಬೇಡಿಕೆ ಪಡೆಯಲಾಗುತ್ತಿತ್ತು. ಡ್ರಗ್ಸ್ ಸರಬರಾಜು ಮಾಡಲು ಕ್ರಿಪ್ಟೋ ಕರೆನ್ಸಿ ಪಾವತಿ, ಅನಾಮಧೇಯ ಡ್ರಾಪ್ ಶಿಪ್ ಸೇರಿದಂತೆ ಅತ್ಯಾಧುನಿಕ ಪಾವತಿ ವಿಧಾನಗಳನ್ನು ಅನುಸರಿಸಲಾಗುತ್ತಿತ್ತು.
.ಉಡುಪಿ ಎಸ್ಪಿ ಮಾಹಿತಿ:
ವಿದೇಶದಲ್ಲಿ ಆನ್‌ಲೈನ್ ಜಾಹೀರಾತು ಮತ್ತು ಫೋನ್ ಸಂಖ್ಯೆ ಬಿತ್ತರಿಸಿ ನಾರ್ಕೋಟಿಕ್ ಅಂಶವುಳ್ಳ ಶಿಫಾರಸು ಮಾಡಿದ ಮಾದಕವನ್ನು ಪೂರೈಸುವ ಜಾಲವಿದೆ. ನಾನಾ ದೇಶಗಳ ಬೇಡಿಕೆ ಪಡೆಯಲು ರೂಪಿಸಿದ ಕಾಲ್ ಸೆಂಟರನ್ನು ತಮಿಳುನಾಡು ಮೂಲದ ವ್ಯಕ್ತಿ ಉಡುಪಿಯಲ್ಲಿ ತೆರೆದಿದ್ದ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ
ಮಾದಕ ದ್ರವ್ಯವನ್ನು ದಿಲ್ಲಿಯಿಂದ ಬೇರೆ ಬೇರೆ ದೇಶಗಳಿಗೆ ಪೂರೈಸುತ್ತಿದ್ದು ಇದರ ಕಿಂಗ್ ಪಿನ್ ನವದೆಹಲ್ಲಿದ್ದಾನೆ. ಉಡುಪಿಯ ಕಾಲ್ ಸೆಂಟರ್ ಆಪರೇಟರನ್ನು ಎನ್‌ಸಿಬಿ ಒಂದು ತಿಂಗಳ ಹಿಂದೆ ಪತ್ತೆ ಹಚ್ಚಿದೆ ಎಂದು ಹೇಳಿದ್ದಾರೆ
Previous Articleಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ
Next Article ನಮ್ಮ ಅಣ್ಣ ಮುಖ್ಯಮಂತ್ರಿ ಆಗಬೇಕು ಎಂದ ತಮ್ಮ !