ಬೆಂಗಳೂರು,ಜು.11-
ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರನ್ನು ಕೊಲೆ ಮಾಡಿದ ಆರೋಪದಲ್ಲಿ ಸಿಲುಕಿರುವ ಸ್ಯಾಂಡಲ್ ವುಡ್ ನಟ ಛಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸ್ವಿಟ್ಜರ್ ಲ್ಯಾಂಡ್ ವೀಸಾ ನಿರಾಕರಿಸಲಾಗಿದೆ.
ಇವರ ಅಭಿನಯದ ಬಾರಿ ನಿರೀಕ್ಷೆ ಮೂಡಿಸಿದ ‘ಡೆವಿಲ್’ ಸಿನಿಮಾ ಶೂಟಿಂಗ್‌ಗಾಗಿ ದರ್ಶನ್ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲು ಯೋಜನೆ ಹಾಕಿದ್ದರು.
ಆದರೆ ದರ್ಶನ್ ಅವರ, ಕ್ರಿಮಿನಲ್ ಹಿನ್ನೆಲೆಯ ಕಾರಣದಿಂದಾಗಿ ಯುರೋಪ್‌ಗೆ ಪ್ರವೇಶ ನಿಷೇಧಿಸಲಾಗಿದೆ. ಇದರಿಂದ ಸ್ವಿಟ್ಜರ್‌ಲ್ಯಾಂಡ್ ವೀಸಾ ರದ್ದಾಗಿದೆ.
ದರ್ಶನ್ ಅವರು ಜುಲೈ 14 ರಂದು ದುಬೈ ಮತ್ತು ಯುರೋಪ್‌ಗೆ ತೆರಳಲು 64ನೇ ಸಿಸಿಎಚ್ ಕೋರ್ಟ್‌ನಿಂದ ಅನುಮತಿ ಪಡೆದಿದ್ದರು.
ಇದೀಗ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆಯಾದ ಹಿನ್ನೆಲೆಯಲ್ಲಿ, ದರ್ಶನ್ ಥೈಲ್ಯಾಂಡ್‌ಗೆ ಶೂಟಿಂಗ್‌ಗಾಗಿ ತೆರಳಲು ಯೋಜನೆ ಹಾಕಿದ್ದಾರೆ. ಇದಕ್ಕಾಗಿ ಕೋರ್ಟ್‌ನಲ್ಲಿ ಮತ್ತೊಮ್ಮೆ ಅನುಮತಿ ಕೋರಿದ್ದಾರೆ. ಕೋರ್ಟ್ ಜುಲೈ 11 ರಿಂದ ಥೈಲ್ಯಾಂಡ್‌ಗೆ ತೆರಳಲು ಅನುಮತಿ ನೀಡಿದ್ದು, ಮುಂದಿನ ವಾರ ದರ್ಶನ್ ಥೈಲ್ಯಾಂಡ್‌ನ ಪುಕೆಟ್‌ಗೆ ತೆರಳಲಿದ್ದಾರೆ.
ಕೊಲೆ ಆರೋಪದಿಂದ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗುರಿಯಾಗಿರುವ ದರ್ಶನ್‌ಗೆ ಈ ಘಟನೆ ಮತ್ತೊಂದು ಆಘಾತವನ್ನುಂಟು ಮಾಡಿದೆ. ‘ಡೆವಿಲ್’ ಚಿತ್ರದ ಶೂಟಿಂಗ್ ಯೋಜನೆಯಲ್ಲಿ ಈ ಬದಲಾವಣೆಯಿಂದ ತಂಡಕ್ಕೆ ಹೊಸ ಸವಾಲುಗಳು ಎದುರಾಗಿವೆ.
Previous Articleಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?
Next Article ಅಮೃತಧಾರೆ ನಟಿ ಹತ್ಯೆ ಯತ್ನ