ಬೆಂಗಳೂರು: ಮಹಿಳೆಯೊಬ್ಬರು ಫೇಕ್ ಬೆಸ್ಕಾಂ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು 14.60 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಬೆಸ್ಕಾಮ್ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬನ ಮಾತನ್ನು ನಂಬಿ ಫೇಕ್ ಬೆಸ್ಕಾಂ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ರೂ.12 ಪಾವತಿಸಲು ಹೋಗಿ,14.60 ಲಕ್ಷ ರೂ. ಕಳೆದುಕೊಂಡಿದ್ದಾರೆ.
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ನಂತಹ ಮಾಲ್ವೇರ್ ಹೊಂದಿರುವ ಈ ದುರುದ್ದೇಶಪೂರಿತ ಅಪ್ಲಿಕೇಶನ್ ಸೈಬರ್ ಅಪರಾಧಿಗಳಿಗೆ ಬಳಕೆದಾರರ ಫೋನ್ಗೆ ಪ್ರವೇಶ ಮಾಡುವುದು ಸುಲಭವಾಗಿದೆ. ಹೀಗಾಗಿ ಆ್ಯಪ್ ಮೂಲಕ ಅವರ ಬ್ಯಾಂಕಿನ ಒನ್ ಟೈಮ್ ಪಾಸ್ವರ್ಡ್ಗಳನ್ನು (OTP ಗಳು) ಸ್ವೀಕರಿಸಲು ಅನುವು ಮಾಡಿಕೊಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

