ಮೈಸೂರು: ಮನುಷ್ಯರು ಮತ್ತು ಜಾನುವಾರುಗಳ ಮೇಲೆ ಹುಲಿ ಮೊದಲಾದ ಪ್ರಾಣಿಗಳು ದಾಳಿ ಮಾಡುತ್ತಿವೆ ಎಂಬ ಕಾರಣದಿಂದ ಅರಣ್ಯ ಇಲಾಖೆ ಬಂಡಿಪುರದ ನಾಗರಹೊಳೆ ಅಭಯಾರಣ್ಯದಲ್ಲಿ ತಾತ್ಕಾಲಿಕವಾಗಿ ಸಫಾರಿ ಸ್ಥಗಿತಗೊಳಿಸಿದೆ
ಸಫಾರಿ ಸ್ಥಗಿತ ಒಂದು ಬಗೆಯಲ್ಲಿ ಸರಿ ಎನಿಸಿದರೂ ಮತ್ತೊಂದು ದೃಷ್ಟಿಯಲ್ಲಿ ಪ್ರವಾಸೋದ್ಯಮವನ್ನೇ ನಂಬಿದ್ದ ವರ್ಗಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಹಿರೀಕಾಟಿ ಗೇಟ್‌ನಿಂದ ಆರಂಭಗೊಂಡು ರಾಷ್ಟ್ರೀಯ ಹೆದ್ದಾರಿ 67ರ ಮೇಲುಕಾಮನಹಳ್ಳಿವರೆಗೆ ಪ್ರವಾಸಿಗರನ್ನು ನಂಬಿಕೊಂಡು ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದವು.
ಇಲ್ಲಿನ ರಸ್ತೆಯುದ್ದಕ್ಕೂ ಎಳನೀರು, ಪಪ್ಪಾಯ, ಕಲ್ಲಂಗಡಿ, ಸೀಬೆ, ಸಪೋಟ ಇತರೆ ಹಣ್ಣುಗಳ ಮಾರಾಟ ನಡೆಯುತ್ತಿತ್ತು. ನಂದಿನಿ ಇತರೆ ಖಾಸಗೀ ತಯಾರಿಕಾ ಸಂಸ್ಥೆಗಳ ಹಾಲು ಮತ್ತು ಹಾಲಿನ ಉತ್ಪನ್ನಗಳ ಸರಬರಾಜು, ಟೀ ಕ್ಯಾಂಟೀನ್ ಜತೆಗೆ ಇತರೆ ಪದಾರ್ಥಗಳ ಮಾರಾಟದ ಅಂಗಡಿಗಳು ರಸ್ತೆಯುದ್ದಕ್ಕೂ ತೆರೆದಿದ್ದವು.
ಬಂಡಿಪುರದ ಅಭಯಾರಣ್ಯದಲ್ಲಿದ್ದ ಸಫಾರಿ ಪ್ರಮಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು. ಅಪರೂಪದ ವನ್ಯಜೀವಿಗಳನ್ನು ವೀಕ್ಷಿಸಲು ಬಯಸುವ ನೂರಾರು ಮಂದಿ ಪ್ರತಿನಿತ್ಯ ಪ್ರವಾಸ ನಿಮಿತ್ತ ಇಲ್ಲಿಗೆ ಬರುತ್ತಿದ್ದರು ಇವರ ಅಗತ್ಯತೆಯನ್ನು ಪೂರೈಸಲು ರಸ್ತೆಯುದ್ದಕ್ಕೂ ಸಣ್ಣಪುಟ್ಟ ಹೋಟೆಲಗಳು ಅಂಗಡಿಗಳು ವಿಶ್ರಾಂತಿ ಧಾಮಗಳು ತಲೆಯೆತ್ತಿದ್ದವು
ಇಲ್ಲಿ ನಡೆಯುತ್ತಿದ್ದ ವ್ಯಾಪಾರ ನೆಚ್ಚಿಕೊಂಡು ನೂರಾರು ಮಂದಿ ಜೀವನ ನಡೆಸುತ್ತಿದ್ದರು. ಆದರೆ, ಸಫಾರಿ ಬಂದ್ ಹಿನ್ನೆಲೆಯಲ್ಲಿ ಈಗ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.ಇದರಿಂದ ಈ ಪ್ರದೇಶದ ಅಂಗಡಿಗಳಲ್ಲಿ ವ್ಯಾಪಾರವೂ ಬಹುತೇಕ ಕ್ಷೀಣಿಸಿದೆ.
ಬಂಡೀಪುರ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಣ್ಣ ಪುಟ್ಟ ವ್ಯಾಪಾರಿಗಳು, ಹೋಂ ಸ್ಟೇ, ರೇಸಾರ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದವರ ಈಗ ನಿರುದ್ಯೋಗಿಗಳಾಗಿದ್ದಾರೆ. ಹಾಗಾಗಿ ಅವರ ಕುಟುಂಬಗಳೂ ಸಂಕಷ್ಟಕ್ಕೀಡಾಗಿ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ವನ್ಯಜೀವಿ ಮತ್ತು ಮಾನವ ಸಂಘರ್ಷದ ಕಾರಣಕ್ಕೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ, ಬಂಡೀಪುರ ಸಫಾರಿಯನ್ನು ತಾತ್ಕಾಲಿಕ ಬಂದ್ ಮಾಡುವಂತೆ ಆದೇಶಿಸಿದ್ದಾರೆ. ಆದರೆ, ಬಂದ್ ಪರಿಣಾಮ ಬಂಡೀಪುರವೇ ಸ್ತಬ್ದವಾಗಿರುವುದು ಒಂದೆಡೆಯಾದರೆ, ಸಣ್ಣ ಪ್ರಮಾಣದ ವ್ಯಾಪಾರ ನೆಚ್ಚಿಕೊಂಡಿದ್ದವರು ಮತ್ತು ದುಡಿಯುವ ವರ್ಗಕ್ಕೆ ಮುಂದೇನು ಎಂಬ ಆತಂಕ ಕಾಡುತ್ತಿದೆ.
Previous Articleಪೊಲೀಸ್ ಕಮಿಷನರ್ ಕಚೇರಿಯಲ್ಲೇ ಹಣ ಕದ್ದ
Next Article ಡಿ.ಕೆ ಶಿವಕುಮಾರ್-ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ!

