ಬೆಂಗಳೂರು,ಡಿ.6 –
ಐದು ತಿಂಗಳ ಹಿಂದೆ ಅದ್ದೂರಿಯಾಗಿ ನಡೆದ ಮದುವೆಯೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಸರಘಟ್ಟದ 26 ವರ್ಷದ ಯುವತಿ ಮತ್ತು ನೆಲಮಂಗಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್ ಜೋಡಿ ಜೂನ್ 9ರಂದು ಅದ್ದೂರಿಯಿಂದ ಮದುವೆಯಾಗಿದ್ದರು.
ಸಾಕಷ್ಟು ವರದಕ್ಷಿಣೆ ಹಾಗೂ ಚಿನ್ನಾಭರಣ ನೀಡಿ ಮದುವೆ ಮಾಡಲಾಗಿತ್ತು. ಆದರೆ ಈ ಜೋಡಿಯ ಮೊದಲ ರಾತ್ರಿಯಿಂದ ಸಮಸ್ಯೆ ಪ್ರಾರಂಭವಾಗಿತ್ತು.
ಆದರೂ ಪತಿ, ಪತ್ನಿ ಯಾವುದನ್ನೂ ತೋರಿಸಿಕೊಳ್ಳದೆ ಸಂಸಾರ ಸಾಗಿಸುತ್ತಿದ್ದರು.
ಈ ನಡುವೆ ದಂಪತಿಗೆ ಮಕ್ಕಳಲಾಗಲಿಲ್ಲ ಎಂದು ಪತಿಯ ಮನೆಯವರು ದೂರಲು ಪ್ರಾರಂಭಿಸಿದ್ದರು. ದಂಪತಿಗೆ ಮಕ್ಕಳಾಗದಿರುವ ಬಗ್ಗೆ ಮನೆಯವರಲ್ಲಿ ಆತಂಕ ಹೆಚ್ಚಾಗುತ್ತಿದ್ದಂತೆ, ಎರಡೂ ಕುಟುಂಬಗಳು ವೈದ್ಯಕೀಯ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದಿವೆ.
ಅದರಂತೆ ಬೆಂಗಳೂರಿನ ಕ್ಲೌ ಡ್ ನೈನ್ ಫರ್ಟಿಲಿಟಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಯಿತು ಇಲ್ಲಿ ವಧುವಿನ ಎಲ್ಲಾ ವೈದ್ಯಕೀಯ ವರದಿಗಳು ಸಾಮಾನ್ಯವಾಗಿದ್ದವು.
ಹೀಗಾಗಿ ಪತಿಯು ಪುರುಷತ್ವ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಯಿತು ಈ ವಿಷಯ ತಿಳಿಯುತ್ತಿದ್ದಂತೆ ಪತಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಘಟನೆ ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಸೆಕ್ಷನ್ 85 (ಬಿಎನ್ ಎಸ್ ) ಮತ್ತು ಡೌರಿ ಪ್ರೊಹಿಬಿಷನ್ ಆಕ್ಟ್‌ನ ಸೆಕ್ಷನ್ 3, 4 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ ನೆಲಮಂಗಲ ಪೊಲೀಸರು, ಆರೋಪಿಗಳ ಶೋಧ ಕಾರ್ಯ ಆರಂಭಿಸಿದ್ದಾರೆ.
Previous Articleದರ್ಶನ್‌ಗೆ ದುಡ್ಡು ಎಲ್ಲಿಂದ ಬಂತು?
Next Article ಶನಿವಾರವೂ 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

