ಬೆಂಗಳೂರು.
ದೇಶದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್ ಸಂಸ್ಥೆಗಳ ಪೈಕಿ ಕರ್ನಾಟಕ ಕ್ರಿಕೆಟ್ ಸಂಸ್ಥೆ(ಕೆಎಸ್ ಸಿಎ)ಗೆ ಅಗ್ರಸ್ಥಾನವಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ನಂತರ ರಾಜ್ಯ ಕ್ರಿಕೆಟ್ ಸಂಸ್ಥೆಯ ಈ ಪ್ರತಿಷ್ಠೆಗೆ ಕೊಂಚ ಪೆಟ್ಟು ಬಿದ್ದಿದೆ.
ಇದನ್ನು ಸರಿಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಹಿರಿಯ ಪತ್ರಕರ್ತ ಹಾಗೂ ಉದ್ಯಮಿ ಕೆ.ಎನ್. ಶಾಂತಕುಮಾರ್, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.
ಹಲವಾರು ಕಾರಣಗಳಿಂದಾಗಿ ಕೆಎಸ್‌ಸಿಎ ಗೆ ಶಾಂತಕುಮಾರ್ ಅವರಂತಹ ದಕ್ಷ ಆಡಳಿತಗಾರ, ಕ್ರೀಡಾಪ್ರೇಮಿ,ಸಮತೋಲಿತ ವ್ಯಕ್ತಿತ್ವದ ನಾಯಕತ್ವದ ಅಗತ್ಯವಿದೆ.
ಉದ್ಯಮಿಯಾಗಿ ಹಲವಾರು ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೆಎನ್ ಶಾಂತಕುಮಾರ್ ಅವರು ಪತ್ರಕರ್ತರಾಗಿಯೂ ಹೆಸರು ಮಾಡಿದ್ದಾರೆ. ಕೇವಲ ಕ್ರಿಕೆಟ್ ಮಾತ್ರವಲ್ಲ ಅನೇಕ ಕ್ರೀಡೆಗಳ ಬಗ್ಗೆ ಆಸಕ್ತಿ ಇರುವ ಶಾಂತಕುಮಾರ್ ಕ್ರಿಕೆಟ್ ವಿಶ್ವಕಪ್, ಫುಟ್ಬಾಲ್ ವಿಶ್ವಕಪ್ ಹಾಕಿ ವಿಶ್ವಕಪ್ ವಿಶ್ವ ಒಲಂಪಿಕ್ ಕ್ರೀಡಾಕೂಟ ಸೇರಿದಂತೆ ಅನೇಕ ಕ್ರೀಡೆಗಳ ವರದಿಯನ್ನು ಮಾಡಿದ್ದಾರೆ ಕ್ರಿಕೆಟ್ ಮಾತ್ರವಲ್ಲದೆ ಅನೇಕ ಕ್ರೀಡೆಗಳ ಬಗ್ಗೆ ಸಂಪೂರ್ಣ ಮಾಹಿತಿಯ ಕಣಜವಾಗಿರುವ ಶಾಂತಕುಮಾರ್ ಮಾನವತಾವಾದಿ.
ಸಮಾಜದ ಎಲ್ಲಾ ಆಗು,ಹೋಗುಗಳಿಗೆ ತಕ್ಷಣವೇ ಸ್ಪಂದಿಸಿ ನಿಷ್ಪಕ್ಷಪಾತ ನಿಲುವು ಪ್ರಕಟಿಸುವ ಅಪರೂಪದ ವ್ಯಕ್ತಿತ್ವ.
ಇಂಥವರು ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರೆ ಕೆಎಸ್‌ಸಿಎ ಪ್ರತಿಷ್ಠೆಗೆ ದೊಡ್ಡ ಘನತೆ ಬಂದಂತಾಗುತ್ತದೆ.
Previous Articleಶನಿವಾರವೂ 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
Next Article ದಿನೇಶ್ ಗುಂಡೂರಾವ್ ಸಿಎಂ ಆಗಬೇಕಂತೆ.

