ಬೆಂಗಳೂರು.
ರಾಜ್ಯದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೊದಲ ಸಾಲಿನಲ್ಲಿ ಕಂಡು ಬಹುದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಈ ಸಂಸ್ಥೆಗೆ ಇದೀಗ ಮಾಜಿ ಟೆಸ್ಟ್ ಆಟಗಾರ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಸಾರಥಿ.
ದೇಶದ ಕ್ರೀಡಾಸಕ್ತರ ಗಮನ ಸೆಳೆದಿದ್ದ ಕರ್ನಾಟಕ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ಈ ಬಾರಿ ಕ್ರಿಕೆಟ್ ದಿಗ್ಗಜರಾದ ಬ್ರಿಜೇಶ್ ಪಟೇಲ್ ಮತ್ತು ವೆಂಕಟೇಶ್ ಪ್ರಸಾದ್ ಪ್ರತ್ಯೇಕ ಸಿಂಡಿಕೇಟ್ ಮಾಡಿಕೊಂಡು ಸ್ಪರ್ಧಿಸಿದ್ದರು.
ಅದರಲ್ಲೂ ಬ್ರಿಜೇಶ್ ಪಟೇಲ್ ಸಿಂಡಿಕೇಟ್ ನಲ್ಲಿ ಗುರುತಿಸಿಕೊಂಡು ಕೆ ಎಸ್ ಸಿ ಎ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ಉದ್ಯಮಿ ಕೆ ಎನ್ ಶಾಂತಕುಮಾರ್ ಅವರು ಸ್ಪರ್ಧಿಸಿದ್ದರು. ಅತ್ಯುತ್ತಮ ಆಡಳಿತಗಾರ ಎಂಬ ಹೆಗ್ಗಳಿಕೆ ಪಡೆದಿರುವ ಶಾಂತಕುಮಾರ್ ಅವರ ಸ್ಪರ್ಧೆಯಿಂದ ಚುನಾವಣಾ ಅಖಾಡಕ್ಕೆ ಭರ್ಜರಿ ರಂಗು ಬಂದಿತ್ತು.
ಶಾಂತಕುಮಾರ್ ಸಾಮರ್ಥ್ಯ ಅರಿತಿದ್ದ ಎದುರಾಳಿ ಬಣ ಆರಂಭದಲ್ಲಿಯೇ ತಾಂತ್ರಿಕ ಕಾರಣ ಒಡ್ಡಿ ಅವರ ನಾಮಪತ್ರವನ್ನು ತಿರಸ್ಕರಿಸಿದ್ದು ಇದಾದ ಬಳಿಕ ಚುನಾವಣೆಯ ತಕರಾರು ಅರ್ಜಿ ಹೈಕೋರ್ಟ್ ಗೆ ಸಲ್ಲಿಕೆಯಾಗಿ ಅಲ್ಲಿ ಶಾಂತಕುಮಾರ್ ಪರ ತೀರ್ಪು ಬಂದಿತ್ತು ಆದರೆ ಚುನಾವಣೆ ಅಖಾಡದಲ್ಲಿ ಶಾಂತಕುಮಾರ್ ವಿರೋಜಿತ ಸೋಲು ಅನುಭವಿಸಿದ್ದಾರೆ
ಭಾನುವಾರ ನಡೆದ ಚುನಾವಣೆಯಲ್ಲಿ ಐವರು ಪದಾಧಿಕಾರಿಗಳು ಮತ್ತು ಆಡಳಿತ ಸಮಿತಿಯ 10 ಸದಸ್ಯರ ಆಯ್ಕೆ ನಡೆಯಿತು. ಒಟ್ಟು 1307 ಮತದಾರರು ತಮ್ಮ ಹಕ್ಕು ಚಲಾಯಿಸಿದರು
ಅದರಲ್ಲಿ ಟೀಮ್ ಗೇಮ್ ಚೇಂಜರ್ಸ್ ತಂಡವನ್ನು ಪ್ರತಿನಿಧಿಸಿದ್ದ ಪ್ರಸಾದ್ ಅವರು 749 ಹಾಗೂ ಅವರ ಪ್ರತಿಸ್ಪರ್ಧಿ ಟೀಮ್ ಬ್ರಿಜೇಶ್ ಬಣದಿಂದ ಕಣಕ್ಕಿಳಿದಿದ್ದ ಹಿರಿಯ ಪತ್ರಕರ್ತ ಕೆ.ಎನ್. ಶಾಂತಕುಮಾರ್ ಅವರು 558 ಮತ ಗಳಿಸಿದರು. ಈ ಮೂಲಕ ವೆಂಕಟೇಶ್ ಪ್ರಸಾದ್ ಕೆ ಎಸ್ ಸಿ ಎ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಸುಜೀತ್ ಸೋಮಸುಂದರ್ (719) ಅವರು ವಿನೋದ್ ಶಿವಪ್ಪ (588) ಎದುರು ಮೇಲುಗೈ ಸಾಧಿಸಿದರು. ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್ (675) ಅವರು ಇ.ಎಸ್ . ಜಯರಾಮ್ (632) ವಿರುದ್ಧ ಗೆದ್ದರು. ಬಿ.ಎನ್. ಮಧುಕರ್ (736) ಅವರು ಎಂ.ಎಸ್. ವಿನಯ್ (571) ಎದುರು ಜಯಿಸಿ, ಖಜಾಂಚಿ ಸ್ಥಾನ ಪಡೆದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬ್ರಿಜೇಶ್ ಬಣದ ಬಿ.ಕೆ. ರವಿ (669) ಅವರು ಎ.ವಿ. ಶಶಿಧರ್ (638) ಎದುರು ಜಯಿಸಿದರು.
ಆಡಳಿತ ಸಮಿತಿಯ ಸದಸ್ಯರಾಗಿ ವಿ.ಎಂ. ಮಂಜುನಾಥ್ , ಶೈಲೇಶ್ ಪೋಳ್ (ಇಬ್ಬರೂ ಆಜೀವ ಸದಸ್ಯರ ವಿಭಾಗ), ಕಲ್ಪನಾ ವೆಂಕಟಾಚಾರ್, ಆಶಿಶ್ ಅಮರಲಾಲ್, ಅವಿನಾಶ್ ವೈದ್ಯ (ಬೆಂಗಳೂರು ವಲಯ), ಶ್ರೀನಿವಾಸ್ ಪ್ರಸಾದ್ (ಮೈಸೂರು), ಡಿ.ಎಸ್. ಅರುಣ್ (ಶಿವಮೊಗ್ಗ), ಸಿ.ಆರ್. ಹರೀಶ್ (ತುಮಕೂರು), ವೀರಣ್ಣ ಸವಡಿ (ಧಾರವಾಡ), ಕುಶಾಲ್ ಪಾಟೀಲ ಗಡಗಿ (ರಾಯಚೂರು) ಮತ್ತು ಶೇಖರ್ ಶೆಟ್ಟಿ (ಮಂಗಳೂರು-ಅವಿರೋಧ) ಅವರು ಆಯ್ಕೆಯಾದರು.
Previous Articleಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಕಿಡಿ
Next Article ಜೈಲಿನಲ್ಲಿ ದರ್ಶನ್ ಕಾಟ ತಡೆಯಲಾಗುತ್ತಿಲ್ಲವಂತೆ!

