ಬೆಳಗಾವಿ,ಡಿ.18:
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಲೆಕ್ಷನ್ ಕಿಂಗ್ ಹಿರಿಯ ನಾಯಕ ಯಡಿಯೂರಪ್ಪ ಅವರ ಹೆಸರನ್ನು ಹಾಳು ಮಾಡಿದ್ದೆ ವಿಜಯೇಂದ್ರ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.
ಕಾಂಗ್ರೆಸ್ ನಾಯಕರು ರಾಜ್ಯದ ಬೊಕ್ಕಸ ಖಾಲಿ ಮಾಡಿ ಹೈಕಮಾಂಡ್ ಘಟನೆ ತುಂಬಿಸುತ್ತಿದ್ದಾರೆ ಎಂದು ವಿಜಯೇಂದ್ರ ಮಾಡಿರುವ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅವರು ರಾಜ್ಯದಲ್ಲಿ ಕಲೆಕ್ಷನ್ ಕಿಂಗ್ ಅಂತ ಯಾರಾದರೂ ಇದ್ದರೆ ಅದು ವಿಜಯೇಂದ್ರ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವ ಖಜಾನೆ, ಎಲ್ಲಿ ಖಾಲಿಯಾಗಿದೆ, ಎಂದು ಪ್ರಶ್ನಿಸಿದ ಅವರು ವಿಜಯೇಂದ್ರ ಅವರ ಕಲೆಕ್ಷನ್ನು ಅವರ ಅಕೌಂಟು ಮತ್ತು ವಹಿವಾಟುಗಳನ್ನು ಬಿಚ್ಚಿಡಬೇಕೇ ಎಂದರು.
ವಿಜಯೇಂದ್ರ ಈ ರೀತಿ ಆರೋಪ ಮಾಡಿ ತಪ್ಪಿಸಿಕೊಂಡು ಹೋಗದೆ ವಿಧಾನಸಭೆಯಲ್ಲಿ ಮಾತನಾಡಲಿ ಅವರ ಎಲ್ಲ ಜಾತಕ ಬಿಚ್ಚಿಡುತ್ತೇನೆ ಪಕ್ಷದ ಅಧ್ಯಕ್ಷರಾಗಿ ಇತಿಮಿತಿಯಿಂದ ಮಾತನಾಡಬೇಕು ಇಂತಹ ಆರೋಪಗಳಿಗೆ ಹೇಗೆ ಉತ್ತರ ಕೊಡಬೇಕು ಎಂದು, ಗೊತ್ತಿದೆ ಅವರು ವಿಧಾನಸಭೆಗೆ ಬರಲಿ ಎಂದು ಸವಾಲು ಹಾಕಿದರು.
Previous Articleನಗರ ಸಭೆಗಳ ವಿರುದ್ಧ ಕ್ರಿಮಿನಲ್ ಕೇಸ್
Next Article ವಿದಾಯದ ಭಾಷಣ ಮಾಡಿದರಾ ಸಿಎಂ ಸಿದ್ದರಾಮಯ್ಯ?

