ಬೆಂಗಳೂರು,ಜ.28:
ಖಾಸಗಿ ಸ್ಲೀಪರ್‌ಕೋಚ್ ಬಸ್‌ಗೆ ಚಲಿಸುತ್ತಿರುವಾಗಲೇ ಏಕಾ ಏಕಿ ಬಿಂಕಿ ತಗುಲಿ ನಡು ರಸ್ತೆಯಲ್ಲೇ ಸುಟ್ಟು ಕರಕಲಾಗಿದೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕಳೆದ ರಾತ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೂಡುರು ಬಳಿ ನಡೆದಿದೆ.
ಈ ಘಟನೆಯಲ್ಲಿ 8 ಪ್ರಯಾಣಿಕರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಂಕಿಗಾಹುತಿಯಾಗಿರುವ ಬಸ್ಸು ಹೊಸನಗರ ತಾಲ್ಲೂಕಿನ ನಿಟ್ಟೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು ಈ ಸ್ಲೀಪರ್ ಬಸ್ ರಾತ್ರಿ 11 ರ ಸುಮಾರಿನಲ್ಲಿ ಸೂಡುರು ಬಳಿ ಚಾಲಿಸುತ್ತಿದ್ದಾಗ ಬಸ್ಸಿನ ತುಂಬೆಲ್ಲಾ ಹೊಗೆ ತುಂಬಿಕೊಂಡು ಪ್ರಯಾಣಿಕರು ಆತಂಕಗೊಂಡಿದ್ದಾರೆ.
ಎಚ್ಚೆತ್ತುಕೊಂಡ ಚಾಲಕ ಬಸ್‌ನಲ್ಲಿದ್ದ 40 ಪ್ರಯಾಣಿಕರನ್ನು ಕ್ಷಣಮಾತ್ರದಲ್ಲಿ ಕೆಳಗಿಳಿಸಿದ್ದಾರೆ.ಚಾಲಕ ಬಸ್ ನಿಲ್ಲಿಸಲು ಮುಂದಾದಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪ್ರಯಾಣಿಕರು ಕೂಡಲೇ ಎಚ್ಚೆತ್ತು ಕೆಳಗಿಳಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ. ಪ್ರಯಾಣಿಕರ ವಸ್ತುಗಳು ಕೂಡ ಸುಟ್ಟು ಕರಕಲಾಗಿದೆ.
ಬೆಂಕಿಯಿಂದ ಬಸ್ ಸಂಪೂರ್ಣ ಸುಟ್ಟುಹೋಗಿದೆ. ರಿಬ್ಬನ್‌ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪ್ರಯಾಣಿಕರಿಗೆ ನೆರವಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆ ಕುರಿತು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Previous Articleಮಹಾ ಡಿಸಿಎಂ ಅಜಿತ್ ಪವಾರ್ ದುರ್ಮರಣ
Next Article ಬೆಂಗಳೂರು ಕಳ್ಳತನಕ್ಕೆ ಅಮೆರಿಕಾ ರಾಯಭಾರಿ ದೂರು

