Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಾನ್ಫಿಡೆಂಟ್ ರಾಯ್ ಸಾವು ಹೇಗಾಯ್ತು ಗೊತ್ತಾ..?
    ಸುದ್ದಿ

    ಕಾನ್ಫಿಡೆಂಟ್ ರಾಯ್ ಸಾವು ಹೇಗಾಯ್ತು ಗೊತ್ತಾ..?

    vartha chakraBy vartha chakraFebruary 1, 2026No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,
    ಆದಾಯ ತೆರಿಗೆ ದಾಳಿಯ ಸಮಯದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ
    ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಪ್ರಕರಣದಲ್ಲಿ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ.
    ಮೊದಲಿಗೆ ರಾಯ್ ಆವರು ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.ಅಲ್ಲದೆ ಗುಂಡು ಹಾರಿಸಿಕೊಂಡ ಪಿಸ್ತೂಲಿಗೆ ಲೈಸೆನ್ಸ್ ಇರಲಿಲ್ಲವೆಂಬ ಶಂಕೆಯೂ ವ್ಯಕ್ತವಾಗಿದ್ದು,ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
    ಕೇರಳದ ಕೊಚ್ಚಿಯಿಂದ ಬಂದ ಆದಾಯ ತೆರಿಗೆ ಅಧಿಕಾರಿಗಳ ತಂಡವು ಬೆಂಗಳೂರಿನ ತಮ್ಮ ಸಹೋದ್ಯೋಗಿಗಳೊಂದಿಗೆ ಕಳೆದ ಮೂರು ದಿನಗಳಿಂದ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು.
    ಕಳೆದ ತಿಂಗಳು ಕಚೇರಿಯಲ್ಲಿ ನಡೆದ ದೊಡ್ಡ ಮಟ್ಟದ ದಾಳಿಯಲ್ಲಿ ಕೆಲವು ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಮತ್ತೊಮ್ಮೆ ದಾಳಿ ನಡೆದಿತ್ತು.
    ಜನವರಿ 30ರ ಮಧ್ಯಾಹ್ನ 12ರ ವೇಳೆ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಗೆ ಐಟಿ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸುತ್ತಿದ್ದರು ಇದಾದ ಎರಡು ಗಂಟೆಗಳ ಬಳಿಕ‌ ರಾಯ್ ತಮ್ಮ ಕಚೇರಿಗೆ ಆಗಮಿಸಿದ್ದರು.ಈ ವೇಳೆ ಐಟಿ ಅಧಿಕಾರಿಗಳು ಅವರಿಗೆ‌ ಕೆಲವು ದಾಖಲೆಗಳಿಗೆ ಸಹಿ ಹಾಕಲ ಸೂಚನೆ‌ ನೀಡಲಾಯಿತು.
    ಇದಾದ ಬಳಿಕ ಮಧ್ಯಾಹ್ನ 3 ಗಂಟೆಗೆ ರಾಯ್ ತಮ್ಮ
    ತಮ್ಮ ಕೊಠಡಿಯಲ್ಲಿ ಕೆಲವು ದಾಖಲೆಗಳಿವೆ ಎಂದು ಐಟಿ‌ ಅಧಿಕಾರಿಗಳಿಗೆ ಹೇಳಿ ಖಾಸಗಿ ಕೊಠಡಿಗಿ ತೆರಳಿದ್ದರು.
    ಇದಾದ ಕೆಲವೇ ನಿಮಿಷಗಳಲ್ಲಿ ಕೊಠಡಿಯಿಂದ ಗುಂಡಿನ ಶಬ್ದ ಕೇಳಿಬಂದಿತ್ತು.ಗುಂಡಿನ ಶಬ್ದ ಕೇಳಿ ಧಾವಿಸಿದ ಉದ್ಯೋಗಿಗಳು ಮತ್ತು ಅಧಿಕಾರಿಗಳು ರಾಯ್ ಅವರು ಕೊಠಡಿಗೆ ಹೋಗಿ ನೋಡಿದಾಗ ಅಲ್ಲಿ ರಾಯ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಎಚ್‌ಎಸ್‌ಆರ್ ಲೇಔಟ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
    ಇನ್ನು ಅವರು ಗುಂಡು ಹಾರಿಸಿಕೊಂಡ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇತ್ತೋ ಇಲ್ಲವೋ ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.
    ಐಟಿ ಅಧಿಕಾರಿಗಳು ಕೇವಲ ಅವರ ಸಂಸ್ಥೆಯ ಮೇಲಿದ್ದ ನಿರ್ಬಂಧ ಆದೇಶಗಳನ್ನು ತೆರವುಗೊಳಿಸುವ ಸಲುವಾಗಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು.‌ಹೊರತಾಗಿ ರಾಯ್ ಅವರನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ ಅಲ್ಲದೆ ಅವರ ದಿನನಿತ್ಯದ ಕಾರ್ಯಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
    ರಾಯ್ ಅವರ ಆಪ್ತ ಸಹಾಯಕ ಹೇಳುವಂತೆ, ಪಿಸ್ತೂಲ್ ಇದ್ದ ಕಾರಣ ರಾಯ್ ಸದಾ ತಮ್ಮ ಬ್ರೀಫ್‌ಕೇಸ್ ಅನ್ನು ಜೊತೆಗೇ ಇಟ್ಟುಕೊಳ್ಳುತ್ತಿದ್ದರು. ಅಪರೂಪಕ್ಕೆ ಅದನ್ನು ಮರೆತರೂ ಸಹ ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಯನ್ನು ಕಳುಹಿಸಿ ತರಿಸಿಕೊಳ್ಳುತ್ತಿದ್ದರು.
    ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಸಿ.ಜೆ ರಾಯ್ ಆತ್ಮಹತ್ಯೆಗೆ ಬಳಸಿದ ಪಿಸ್ತೂಲಿನ ತಯಾರಿಕೆ ಮತ್ತು ಕ್ಯಾಲಿಬರ್ ಅನ್ನು ಬಾಲಿಸ್ಟಿಕ್ ತಜ್ಞರ ತಂಡ ಪರಿಶೀಲಿಸಿ ದೃಢಪಡಿಸಬೇಕಿದೆ ಎಂದಿದ್ದಾರೆ.
    ಕಾನ್‌ಫಿಡೆಂಟ್ ಗ್ರೂಪ್‌ನ ವ್ಯಸ್ಥಾಪಕ ನಿರ್ದೇಶಕ‌ ಟಿ.ಎ. ಜೋಸೆಫ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಐಟಿ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ಅವರು ದೂರಿನಲ್ಲಿ ಮಾಡಿಲ್ಲ. ಆದ್ದರಿಂದ ನಾವು ಅಸಹಜ ಮರಣ ಪ್ರಕರಣವನ್ನು ದಾಖಲಿಸಿದ್ದೇವೆ. ಕುಟುಂಬದವರು ಹೊಸ ಆರೋಪಗಳನ್ನು ಮಾಡಿದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    Verbattle
    Verbattle
    Verbattle
    Bengaluru
    Share. Facebook Twitter Pinterest LinkedIn Tumblr Email WhatsApp
    Previous Articleಶಬರಿಮಲೈ ಚಿನ್ನ ಕಳವಿನಲ್ಲಿ ಖ್ಯಾತ ನಟನ ನಂಟು..?
    Next Article ಕಾನ್ಫಿಡೆಂಟ್ ರಾಯ್ ಡೈರಿಯಲ್ಲಿ ಏನಿದೆ ಗೊತ್ತಾ..?
    vartha chakra
    • Website

    Related Posts

    ಬೆಂಗಳೂರು ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ

    February 3, 2026

    ಅಧಿಕಾರ ಹಂಚಿಕೆ ಬಗ್ಗೆ ವಿಧಾನಸಭೆಯಲ್ಲಿ ಡಿಸಿಎಂ ಗುಡುಗು

    February 2, 2026

    ನೇಪಾಳಿ ಗ್ಯಾಂಗ್ ಇದೆ ಹುಷಾರ್!

    February 2, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರು ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ

    ಅಧಿಕಾರ ಹಂಚಿಕೆ ಬಗ್ಗೆ ವಿಧಾನಸಭೆಯಲ್ಲಿ ಡಿಸಿಎಂ ಗುಡುಗು

    ನೇಪಾಳಿ ಗ್ಯಾಂಗ್ ಇದೆ ಹುಷಾರ್!

    ವಿಧಾನಸಭೆಯಲ್ಲಿ ಅಶೋಕ್ ವೀರಾವೇಶದ ಭಾಷಣ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Conradjag on ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.
    • Jamespiedy on ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ
    • Jamespiedy on ವಕೀಲರಿಗೆ ಕಪ್ಪು ಕೋಟ್ ಬೇಕಿಲ್ಲ | Lawyers
    Latest Kannada News

    ಬೆಂಗಳೂರು ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ

    February 3, 2026

    ಅಧಿಕಾರ ಹಂಚಿಕೆ ಬಗ್ಗೆ ವಿಧಾನಸಭೆಯಲ್ಲಿ ಡಿಸಿಎಂ ಗುಡುಗು

    February 2, 2026

    ನೇಪಾಳಿ ಗ್ಯಾಂಗ್ ಇದೆ ಹುಷಾರ್!

    February 2, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.