ಬೆಂಗಳೂರು,
ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಹಾಗೂ ಉದ್ಯಮಿ ಸಿಜೆ ರಾಯ್ ಆದಾಯ ತೆರಿಗೆ(ಐಟಿ) ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿರುವ ಬೆನ್ನಲ್ಲೇ ಇವರ ಚಟುವಟಿಕೆ ಹಾಗೂ ಒಡನಾಟದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಅಶೋಕ್ ನಗರ ಪೊಲೀಸರು ರಾಯ್ ಅವರು ಬಳಸುತ್ತಿದ್ದ ವಸ್ತುಗಳು ಬ್ರೀಫ್ ಕೇಸ್ ಮತ್ತು ಡೈರಿಯೊಂದನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿರುವ ಅಂಶಗಳ ಪರಿಶೀಲನೆ ಆರಂಭಿಸಿದ್ದಾರೆ.
ರಾಯ್ ಅವರು ಬರೆದಿರುವ ತಮ ಡೈರಿಯಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಶಾಸಕರ ಹೆಸರನ್ನು ಉಲ್ಲೇಖಿಸಿದ್ದಾರೆ.
ಡೈರಿ ಬರೆಯುವ ಅಭ್ಯಾಸ ಹೊಂದಿದ್ದ ರಾಯ್ ಅದರಲ್ಲಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಶಾಸಕರ ಹೆಸರುಗಳು, ಜೊತೆಗೆ ಓರ್ವ ಸಂಸದರ ಹೆಸರನ್ನು ಕೂಡ ಬರೆದಿದ್ದಾರೆ.
ಇದಲ್ಲದೆ ಮಾಜಿ ಸಂಸದರು ಚಿತ್ರದ ರಂಗದ ಗಣ್ಯರ ಹೆಸರು ಅನೇಕ ನಟಿಯರು ಮಾಡೆಲ್ ಗಳ ಹೆಸರು ಕೂಡ ಉಲ್ಲೇಖ ಮಾಡಿದ್ದಾರೆ. ವ್ಯವಹಾರಿಕವಾಗಿ ಒಂದಷ್ಟು ವಿಚಾರಗಳು ಹಾಗು ಒಪ್ಪಂದಗಳ ಕುರಿತಂತೆ ಕೂಡ ಡೈರಿಯಲ್ಲಿ ಬರೆದಿದ್ದಾರೆ ಎಂದು ಗೊತ್ತಾಗಿದೆ
ಈ ನಡುವೆ ಸಿಜೆ ರಾಯ್ ಅವರ ಸಹೋದರ ಬಾಬು ಅವರು ಮಾತನಾಡಿ, ರಾಯ್ ಕಳೆದ ಕೆಲವು ದಿನಗಳಿಂದ ಐಟಿ ಅಧಿಕಾರಿಗಳಿಂದ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಕುಟುಂಬಸ್ಥರು ಪ್ರತ್ಯೇಕ ದೂರು ದಾಖಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Previous Articleಕಾನ್ಫಿಡೆಂಟ್ ರಾಯ್ ಸಾವು ಹೇಗಾಯ್ತು ಗೊತ್ತಾ..?
Next Article ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

