ಬೆಂಗಳೂರು,
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ ರಾಯ್ ಅವರ ದುರಂತ ಅಂತ್ಯದ ಅಸಲಿ ಕಾರಣ ಬೆಳಕಿಗೆ ಬಂದಿದೆ.
ಉದ್ಯಮಿ ರಾಯ್ ಅವರು ತಮ್ಮ ವಹಿವಾಟಿಗಾಗಿ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರಲಿಲ್ಲ. ಆದರೆ ಕೆಲವು ರಾಜಕಾರಣಿಗಳಿಂದ ಹಣ ಪಡೆದಿದ್ದರು. ಇದರಲ್ಲಿ ಬಹುತೇಕರು ಕಪ್ಪು ಹಣ ನೀಡಿದ್ದರು ಎನ್ನಲಾಗಿದೆ.
ರಾಯ್ ಅವರು ಕಳೆದ ಆರು ತಿಂಗಳಿನಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುವುದು ಇದುವರೆಗಿನ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ರಾಯ್ ಅವರು ರಾಜ್ಯವಲ್ಲದೇ ದೇಶ,ವಿದೇಶಗಳಲ್ಲಿ ಸುಮಾರು 8 ಸಾವಿರ ಕೋಟಿಗೂ ಹೆಚ್ಚು ಸ್ಥಿರ-ಚರ ಆಸ್ತಿ ಹೊಂದಿದ್ದಾರೆ. ಆದರೆ ಅವರು ಹೂಡಿಕೆಗೆ ಎಲ್ಲಿಯೂ ಬ್ಯಾಂಕ್ ಸಾಲ ಮಾಡಿಲ್ಲ ಎಂದು ತಿಳಿದು ಬಂದಿದೆ.
ಬ್ಯಾಂಕ್ ಸಾಲವಿಲ್ಲದೇ ಇಷ್ಟೊಂದು ಅಪಾರ ಪ್ರಮಾಣದ ಹಣ ಅವರಿಗೆ ಎಲ್ಲಿಂದ ಬಂತು ಎಂಬುವುದು ಎಲ್ಲ ಉದ್ಯಮಿಗಳ ಪ್ರಶ್ನೆಯಾಗಿದೆ. ಇವರ ಹೊಸ ಯೋಜನೆಗಳಿಗೆ ಕೆಲವು ರಾಜಕೀಯ ಗಣ್ಯ ವ್ಯಕ್ತಿಗಳು, ಕೆಲ ಉನ್ನತ ಮಟ್ಟದ ಅಧಿಕಾರಿಗಳು ಹೂಡಿಕೆ ಮಾಡಿದ್ದಾರೆ ಎಂಬುವುದು ಸಹ ತಿಳಿದು ಬಂದಿದೆ.
ಈ ಹಣದ ಪೈಕಿ ಬಹುಪಾಲು ಅಕ್ರಮ ಹಣ ಆಗಿರಬಹುದೆಂದು ತನಿಖಾ ಸಂಸ್ಥೆಗಳಿಗೆ ಶಂಕೆ ವ್ಯಕ್ತವಾಗಿದೆಕಾನ್ಫಿಡೆಂಟ್ ಸಂಸ್ಥೆ ಮೇಲೆ ಪದೇ ಪದೇ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ಮಾಡುತ್ತಿದ್ದುದ್ದರಿಂದ ಇವರ ಬಳಿ ಹೂಡಿಕೆ ಮಾಡಿದ್ದ ಹಣ ವಾಪಸ್ ಕೊಡುವಂತೆ ರಾಜಕಾರಣಿಗಳು, ಗಣ್ಯವ್ಯಕ್ತಿಗಳು,ಉನ್ನತ ಮಟ್ಟದ ಅಧಿಕಾರಿಗಳು ಒತ್ತಾಯಿಸುತ್ತಿದ್ದರೆಂಬ ಅನುಮಾನ ಈಗ ವ್ಯಕ್ತವಾಗಿದೆ.
ಒಂದು ವೇಳೆ ದಾಳಿ ಸಂದರ್ಭದಲ್ಲಿ ರಾಯ್ ಅವರು ತಮ ಹೆಸರು ಎಲ್ಲಿ ಬಾಯ್ಬಿಡುತ್ತಾರೆಂಬ ಆತಂಕದಲ್ಲಿ ಹಣ ವಾಪಸ್ ಕೊಡುವಂತೆ ಅವರುಗಳೆಲ್ಲರೂ ಒತ್ತಾಯಿಸುತ್ತಿದ್ದಾರೆಂಬ ಕಾರಣಕ್ಕೆ ರಾಯ್ ಅವರು ಒತ್ತಡಕ್ಕೆ ಒಳಗಾಗಿದ್ದರೇ ಎಂಬ ಸಂಶಯ ಅಲ್ಲಗೆಳೆಯುವಂತಿಲ್ಲ.
ಐಟಿ ಅಧಿಕಾರಿಗಳಲ್ಲದೇ ಕೇಂದ್ರ ತನಿಖಾ ಸಂಸ್ಥೆಗಳು ರಾಯ್ ಅವರ ವ್ಯವಹಾರದತ್ತ ಕಣ್ಣಿಟ್ಟಿದ್ದವು. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ರಾಯ್ ಅವರು ಕಳೆದ ಆರು ತಿಂಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುವುದು ತನಿಖೆಯಿಂದ ಗೊತ್ತಾಗಿದೆ.
ರಾಯ್ ಅವರು ಕರ್ನಾಟಕ, ಕೇರಳ ಅಲ್ಲದೇ ದುಬೈ ಸೇರಿದಂತೆ ವಿದೇಶಗಳಲ್ಲಿಯೂ ತಮ ವ್ಯವಹಾರವನ್ನು ವಿಸ್ತರಿಸಿದ್ದರು. ರಾಯ್ ಅವರ ಹೊಸ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಆಗದ ಪರಿಣಾಮ ಹಣಕಾಸು ನಿರ್ವಹಣೆಯಲ್ಲಿ ಅವರು ವಿಫಲರಾಗಿದ್ದರು ಎಂಬ ಮಾತು ಕೇಳಿ ಬಂದಿದೆ. ಜೀವನ ಶೈಲಿಯ ಅನುಗುಣಕ್ಕನುಸಾರವಾಗಿ ರಾಯ್ ಅವರು ಆದಾಯದ ಬಹುಪಾಲನ್ನು ಖರ್ಚು ಮಾಡುತ್ತಿದ್ದುದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು ಎಂಬುದು ಕಂಡು ಬಂದಿದೆ. ಒಂದೆಡೆ ಹಣ ಹೂಡಿದವರ ಒತ್ತಡ, ಮತ್ತೊಂದೆಡೆ ಆದಾಯ ತೆರಿಗೆ ಹಾಗೂ ಇತರೆ ಏಜೆನ್ಸಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ರಾಯ್ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಈ ಎಲ್ಲಾ ಒತ್ತಡಗಳು ಒಂದೇ ಬಾರಿಗೆ ರಾಯ್ ಅವರ ಜೀವನದಲ್ಲಿ ಆವರಿಸಿಕೊಂಡ ಪರಿಣಾಮ ಅದರಿಂದ ಹೊರ ಬರಲಾಗದೇ ಆತಹತ್ಯೆಯ ನಿರ್ಧಾರ ಮಾಡಿ ತಮ್ಮ ಪ್ರಾಣವನ್ನು ತ್ಯಜಿಸಿದರೇ ಎಂಬೆಲ್ಲಾ ಅಂಶಗಳು ವ್ಯಕ್ತವಾಗುತ್ತಿವೆ.
Previous Articleಬೆಂಗಳೂರು ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ
Next Article ಕನಕೋತ್ಸವದಲ್ಲಿ ಶಿವಕುಮಾರ್ ಕೊಟ್ಟ ಸಂದೇಶ ಗೊತ್ತಾ..?


3 Comments
betmgm Texas betmgm Maryland betmgm NM
Explore avenues of endless fun and lucrative opportunities. In ignation casino official website, audited fairness ensures trust. Enter, enjoy, and exit richer!
Explore the thrilling world of online gaming where endless fun awaits. Bovada 100% Bonus offers top live dealer games and cashback offers for all players. With Bovada, enjoy premier wins and secure, reliable entertainment every day!