ಬೆಂಗಳೂರು,
ಮಹಾನಗರ ಬೆಂಗಳೂರಿನ ಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ದೇಶದಲ್ಲೇ ವಿನೂತನವಾದ ‘ಸಖಿ ಆಟೋ ಸೇವೆ ಆರಂಭವಾಗಲಿದೆ.
ಈ ಸೇವೆಯು ಫೆ. 14 ರ (ಪ್ರೇಮಿಗಳ ದಿನದಂದು) ಬೆಂಗಳೂರಿನಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.ಇದು ಮಹಿಳಾ ಪ್ರಯಾಣಿಕರಿಗಾಗಿ, ಮಹಿಳಾ ಚಾಲಕಿಯರೇ ನಡೆಸುವ ವಿಶೇಷ ಸಾರಿಗೆ ವ್ಯವಸ್ಥೆಯಾಗಿದೆ. ಆರಂಭದಲ್ಲಿ ಬೆಳಿಗ್ಗೆ 6:00 ರಿಂದ ಮಧ್ಯರಾತ್ರಿ 12:00 ರವರೆಗೆ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಗನುಗುಣವಾಗಿ 24 ಗಂಟೆಗಳ ಕಾಲ ವಿಸ್ತರಿಸುವ ಯೋಜನೆಯಿದೆ.
ಈ ಆಟೋ ಸೇವೆ ಇತರ ಆಪ್‌ಗಳಂತೆ ಮಳೆ ಅಥವಾ ಹೆಚ್ಚಿನ ದಟ್ಟಣೆಯ ಸಮಯದಲ್ಲಿ ದರ ಏರಿಕೆಯಾಗುವುದಿಲ್ಲ. ಭವಿಷ್ಯದಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡ ಮಹಿಳೆಯರನ್ನು ಕೂಡ ಚಾಲಕಿಯರನ್ನಾಗಿ ನೇಮಿಸಿಕೊಳ್ಳುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.
ಸಖಿ ಆಟೋದಲ್ಲಿ ಮೊದಲ 2 ಕಿಲೋಮೀಟರ್‌ಗಳಿಗೆ 50 ರೂ. ಇರುತ್ತದೆ. ನಂತರದ ಪ್ರತಿ ಕಿಲೋಮೀಟರ್‌ಗೆ 20 ರೂ ಇರುತ್ತದೆ. ಇದೀಗ ಸಂಸ್ಥೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಮಾಡುತ್ತಿದೆ. ಅಲ್ಲಿಯವರೆಗೆ ride.sakhiwomen.in ಹಾಗೂ 63619 33364 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ ಮಾಡಬಹುದು.
ಈ ವಿನೂತನ ಆಲೋಚನೆಯ ಹಿಂದೆ 24 ವರ್ಷದ ಉದ್ಯಮಿ ಕೃಷ್ಣವಿ ಪರೇಖ್ ಅವರ ಶ್ರಮವಿದೆ. ಮುಂಬೈನಲ್ಲಿ ತಾವು ಅನುಭವಿಸಿದ ಅಸುರಕ್ಷಿತ ಪ್ರಯಾಣದ ಅನುಭವಗಳೇ ಈ ಸಂಸ್ಥೆಯನ್ನು ಆರಂಭಿಸಲು ಅವರಿಗೆ ಪ್ರೇರಣೆಯಾಗಿದೆ. ಈಗಾಗಲೇ 21 ರಿಂದ 40 ವರ್ಷದ ಸುಮಾರು 50 ನುರಿತ ಮಹಿಳಾ ಚಾಲಕಿಯರು ಈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.ನಗರದ ಮಹಿಳೆಯರಿಗೆ ಇದು ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯಾಗಲಿದೆ.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022

