ಬೆಂಗಳೂರು,
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಟ ಮಾಡಿದ್ದ ಸ್ವಯಂ ಘೋಷಿತ ಮಂತ್ರವಾದಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ವಿಮಾನ ನಿಲ್ದಾಣ ಆಡಳಿತ ಕಚೇರಿಯ ವಿಳಾಸಕ್ಕೆ ಅಂಚೆ ಮೂಲಕ ಮಾಟ ಮಂತ್ರ ಪೂಜೆ ಮಾಡಿದ ವಸ್ತುಗಳನ್ನು ಪಾರ್ಸೆಲ್ ಬಂದಿತ್ತು.ಇದನ್ನು ನೋಡಿ ಹೆದರಿದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮಾಟ, ಮಂತ್ರದ ಪಾರ್ಸೆಲ್ ಕಳುಹಿಸಿದ್ದ ಸ್ವಯಂ ಘೋಷಿತ ಮಂತ್ರವಾದಿಯನ್ನು ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ.
ಪಾರ್ಸೆಲ್ ತೆಗೆದು ನೋಡಿ ಆತಂಕಕ್ಕೊಳಗಧ
ಸಿಬ್ಬಂದಿ ಬಾಕ್ಸ್ ಸಮೇತ ಕೆಐಎಎಲ್ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ನೀಡಿದ್ದ ದೂರು ಆಧರಿಸಿ
ಬಂಧಿತನನ್ನು ನ್ಯೂಜಿಲೆಂಡ್ ಸುಬಾಷ್ ಜೈ ಅಜೀಜ್ ಎಂದು ಗುರುತಿಸಲಾಗಿದೆ. ಹೈದರಾಬಾದ್ ನಲ್ಲಿ ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೊಬ್ಬ ದೇವಮಾನವ ಎಂದು ಹೇಳಿಕೊಂಡಿದ್ದಾನೆ.
ಬ್ಲ್ಯಾಕ್ ಮಾಜಿಕ್ ರೀತಿಯ ಪಾರ್ಸೆಲ್ ಏಕೆ ಕಳುಹಿಸಿದ್ದು ಎಂದು ಕೇಳಿದಾಗ ವಿಮಾನ ದುರಂತ ಸಂಭವಿಸದಿರಲಿ ಎಂದು ಪೂಜೆ ಮಾಡಿ ಕಳುಹಿಸಿರುವುದಾಗಿ ಹೇಳಿದ್ದಾನೆ.
ಈ ಹಿಂದೆ ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತ ಬೆಂಗಳೂರಿನಲ್ಲಿ ನಡೆಯದಿರಲಿ ಎಂದು ಪೂಜೆ ಮಾಡಿದ್ದೇನೆ ಎಂದು ಹೇಳಿದ್ದಾನೆ .ತಾನು ಬಳಸಿದ್ದ ಹಾರ, ಅರಿಶಿನ ಕುಂಕುಮ ಹಾಗೂ ಪೋಟೋಗಳನ್ನು ನೀಡಿ ನಾನೊಬ್ಬ ದೇವ ಮಾನವನಾಗಿದ್ದು, ನಾನು ಹಾಕಿದ ಹಾರವನ್ನು ಒಳ್ಳೆ ಕೆಲಸಗಳಿಗೆ ನೀಡುತ್ತೇನೆ. ಎಲ್ಲೆಂದರಲ್ಲಿ ಎಸೆಯಲ್ಲ ಎಂದಿದ್ದಾನೆ.
ಕಳೆದ ತಿಂಗಳು ಉತ್ತರ ಪ್ರದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ತನ್ನ ಕೊರಳಲ್ಲಿದ್ದ ಹಾರ, ಅರಿಶಿನ ಕುಂಕುಮ, ಸೇವನೆಗೆ ತೆಗೆದುಕೊಂಡಿದ್ದ ಕಬ್ಬು, ಕೆಲ ದೇವರ ಪೋಟೋಗಳನ್ನೆಲ್ಲ ಒಂದು ಬಾಕ್ಸ್ ನಲ್ಲಿಟ್ಟು ಜೊತೆಗೆ ಶ್ರೀಲಂಕಾ ಭಾಷೆಯಲ್ಲಿ ಪತ್ರವನ್ನು ಬರೆದು ಬಾಕ್ಸ್ನಲ್ಲಿ ಹಾಕಿದ್ದ.ಬಳಿಕ ಬಾಕ್ಸ್ ಹಿಡಿದು ಕೆಂಪೇಗೌಡ ವಿಮಾನನಿಲ್ದಾಣದಲ್ಲಿರುವ ಅಂಚೆ ಕಚೇರಿಗೆ ತೆರಳಿ ಕೆಐಎಎಲ್ ಸಿಇಓ ಹೆಸರಿಗೆ ಕೋರಿಯರ್ ಮಾಡಿ ಬಂದಿದ್ದೇ ಎಂದು ಹೇಳಿದ್ದಾನೆ.
ಬಳಿಕ ಪೋಸ್ಟ್ ಆಫೀಸ್ ಸಿಬ್ಬಂದಿ ಕೆಐಎಎಲ್ ಕಚೇರಿಗೆ ತೆರಳಿ ಬಾಕ್ಸ್ ಡೆಲೆವರಿ ಮಾಡಿದ್ದಾರೆ.ಆ ವೇಳೆ ಬಾಕ್ಸ್ ತೆಗೆದು ನೋಡಿದಾಗ ಎಲ್ಲಾ ವಸ್ತು ಮಾಟ ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದ್ದು, ಇದನ್ನು ಕಂಡು ಸಿಬ್ಬಂದಿ ಶಾಕ್ ಆಗಿದ್ದರು. ಈ ಸಂಬಂಧ ಕೆಂಪೇಗೌಡ ವಿಮಾನನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು.
Previous Articleಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು
Next Article ದಿನಗೂಲಿ ನೌಕರರಿಗೆ ಬಂಪರ್!

