ನವದೆಹಲಿ: ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಕ್ಕರೆ ರಫ್ತಿನ ಮೇಲೂ ನಿರ್ಬಂಧ ಹೇರಿದ್ದು, ಜೂನ್ 1ರಿಂದ ಜಾರಿಯಾಗಲಿದೆ. ಗೋಧಿ ರಫ್ತು ನಿಷೇಧಿಸಿದ್ದ ಸರ್ಕಾರ ಇದೀಗ ಸಕ್ಕರೆ ಸರಬರಾಜಿನ ಮೇಲೂ ನಿರ್ಬಂಧ ವಿಧಿಸಿದೆ. ಸೆಪ್ಟೆಂಬರ್ಗೆ ಕೊನೆಗೊಳ್ಳುವಂತೆ ವರ್ಷದಲ್ಲಿ 10 ಲಕ್ಷ ಟನ್ಗಳಷ್ಟು ಸಕ್ಕರೆಯನ್ನು ರಫ್ತು ಮಾಡಬೇಕು ಎಂಬ ಮಿತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಅದರ ಬೆಲೆ ಏರಿಕೆಯನ್ನು ತಡೆಯುವ ಸಲುವಾಗಿ ಸಕ್ಕರೆ ರಫ್ತನ್ನು (ಕಚ್ಚಾ, ಸಂಸ್ಕರಿಸಿದ ಮತ್ತು ಬಿಳಿ ಸಕ್ಕರೆ) ನಿರ್ಬಂಧಿತ ವರ್ಗದಲ್ಲಿ ಇರಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ.
ಸುಮಾರು 82 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಕಾರ್ಖಾನೆಗಳಿಗೆ ಸೂಚಿಸಲಾಗಿತ್ತು. ಇದರಲ್ಲಿ 78 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ. ಇದು ಈವರೆಗಿನ ಸಾರ್ವಕಾಲಿಕ ಅತ್ಯಧಿಕ ಪ್ರಮಾಣದ ರಫ್ತಾಗಿದೆ.
Previous Articleಚಿನ್ಮಯಿ ಆಸ್ಪತ್ರೆ ಮಾಲೀಕ ಇನ್ನಿಲ್ಲ
Next Article ಪ್ರಾಧ್ಯಾಪಕರ ನೇಮಕ ಪರೀಕ್ಷೆ ಅಕ್ರಮ