ಕುಂದಾಪುರದ ಉಪ್ಪಿನಕುದ್ರು ನಿವಾಸಿ ಶಿಲ್ಪಾದೇವಾಡಿಗ (25) ಮೇ 23ರ ಸೋಮವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮೇ 25ರ ಬುಧವಾರ ಬೆಳಗ್ಗೆ ಸಾವಿಗೀಡಾಗಿದ್ದಾರೆ. ಈ ಸಾಲಿನ ಹಿಂದೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ.
ಕೋಟೇಶ್ವರ ಸಮೀಪದ ಮೂಡುಗೋಪಾಡಿ ನಿವಾಸಿ ಅಜೀಜ್ (32) ಮತ್ತು ಅವರ ಪತ್ನಿ ಸಲ್ಮಾ ಅವರ ವಿರುದ್ಧ ಮೃತರ ಸಹೋದರ ದೂರು ದಾಖಲಿಸಿದ್ದು, ಶಿಲ್ಪಾ ಅಜೀಜ್ ಅವರ ಪ್ರೇಮ ಪ್ರಕರಣಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಜೀಜ್ ಆರು ವರ್ಷಗಳ ಹಿಂದೆ ಹಂಗಳೂರು ನಿವಾಸಿ ಸಲ್ಮಾ (30) ಅವರನ್ನು ಮದುವೆಯಾಗಿದ್ದರು. ಮದುವೆಗೂ ಮುನ್ನ ಟ್ಯುಟೋರಿಯಲ್ ತರಗತಿಯಲ್ಲಿ ಶಿಲ್ಪಾಗೆ ಪರಿಚಯವಾಗಿತ್ತು. ಶಿಲ್ಪಾ ಮೂರು ವರ್ಷಗಳಿಂದ ತಲ್ಲೂರಿನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು.
ಅಜೀಜ್ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ ಶಿಲ್ಪಾ ಅವರನ್ನು ಮದುವೆಯಾಗುವುದಾಗಿ ಹೇಳಿ ಆಮಿಷ ಒಡ್ಡಿ ಕೋಟೇಶ್ವರದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಅಜೀಜ್ ಅವರನ್ನು ನಂಬಿದ್ದ ಶಿಲ್ಪಾ ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ಶಿಲ್ಪಾ ಜೊತೆ ಹಲವು ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದರು. ಆದರೆ, ಅಜೀಜ್ ಪತ್ನಿ ಸಲ್ಮಾ ಮದುವೆಗೆ ಒಪ್ಪಿರಲಿಲ್ಲ.
ಅಂದಹಾಗೆ, ಅಜೀಜ್ ಅವರು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಶಿಲ್ಪಾಗೆ ಇಸ್ಲಾಂ ಗೆ ಮತಾಂತರ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದರು. ತಡವಾಗಿಯಾದರೂ ಅಜೀಜ್‌ನ ನಿಜಸ್ವರೂಪ ತಿಳಿದ ಶಿಲ್ಪಾ ಮೇ 23ರ ಸೋಮವಾರ ರಾತ್ರಿ ಇಲಿ ವಿಷ ಸೇವಿಸಿ ಮೇ 25ರಂದು ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಶಿಲ್ಪಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಬಳಿ ಜಮಾಯಿಸಿದರು. ಮೃತ ಶಿಲ್ಪಾ ಪೋಷಕರಿಗೆ ನೈತಿಕ ಬೆಂಬಲ ನೀಡಿದ ಹಿಂದೂ ಸಂಘಟನೆಗಳ ಮುಖಂಡರು ಆರೋಪಿಯನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ.
ಮೃತ ಶಿಲ್ಪಾ ಮತಾಂತರದ ಕುರಿತು ಒತ್ತಡದಲ್ಲಿದ್ದರು ಎಂದು ತಿಳಿದು ಬಂದಿದೆ. ಇದು ಲವ್ ಜಿಹಾದ್ ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಬ್ ಇನ್ಸ್ ಪೆಕ್ಟರ್ ಸದಾಶಿವ ಗವರೋಜಿ ಕಾರ್ಯಕರ್ತರಿಗೆ ಭರವಸೆ ನೀಡಿದರು.
Previous Articleಊಟ ಕೊಡದಿದ್ದಕ್ಕೆ ಹೋಟೆಲಿಗೆ ಬೆಂಕಿ!
Next Article ರಕ್ತ ಸಂಬಂಧದಲ್ಲಿಯೇ ಮದುವೆ; ಕರ್ನಾಟಕಕ್ಕೆ ಎರಡನೇ ಸ್ಥಾನ