ಮದುವೆ ನಿರಾಕರಿಸಿದ್ದಕ್ಕೆ ಸೋದರಮಾವನ ಮಕ್ಕಳೇ ಯುವತಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಕೊತ್ತನೂರಿನಲ್ಲಿ ನಡೆದಿದೆ. ಯುವತಿ ಇನ್ನು ವಿದ್ಯಾಭ್ಯಾಸ ಮಾಡುತ್ತಿದ್ದು, ಮಾವನ ಮಗನ ಜೊತೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದು ಇದರಿಂದ ಆಕ್ರೋಶಗೊಂಡ ಮಾವನ ಮಕ್ಕಳಾದ ಕೊತ್ತನೂರಿನ ಚಂದ್ರಶೇಖರ್, ಮಂಜುನಾಥ್ ಹಾಗು ಭೈರೇಂದ್ರ ಯುವತಿಯನ್ನು ಅಪಹರಿಸಲು ಯತ್ನಿಸಿದ್ದಾರೆ.
ಯುವತಿಯ ಮನೆಗೆ ಹೋಗಿ ಅವಾಜ್ ಹಾಕಿ ಆಕೆಯನ್ನು ಅಪಹರಿಸಲು ಯತ್ನಿಸಿದಾಗ ಅಕ್ಕಪಕ್ಕದವರು ಯುವತಿಯ ಮನೆಯವರು ಸಹಾಯಕ್ಕೆ ಬರುತ್ತಿದ್ದಂತೆ ಯುವತಿಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಹೋಗುವಾಗ ಯಾವುದೇ ಕಾರಣಕ್ಕೂ ನಿನ್ನ ಮಗಳನ್ನು ಬಿಡುವುದಿಲ್ಲ, ಎಳೆದುಕೊಂಡು ಹೋಗಿ ಮದುವೆ ಆಗುವೆ ಎಂದು ಚಂದ್ರಶೇಖರ್ ಅತ್ತೆ ಮಗಳು ಹಾಗು ಮಾವನಿಗೆ ಬೆದರಿಕೆ ಹಾಕಿದ್ದಾನೆ. ಈ ಸಂಬಂಧಿಸಿದಂತೆ ಯುವತಿ ಹಾಗು ಕುಟುಂಬಸ್ಥರು ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ.