ಮುಂಬೈ: ಮಾಹಿತಿ ತಂತ್ರಜ್ಞಾನದ ಶೇರುಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿದಂತೆ ಹಲವು ಐಟಿ ಕಂಪನಿಗಳ ಶೇರುಗಳ ಮೌಲ್ಯ ಕುಸಿಯುತ್ತಲೇ ಇದೆ.
ಯುಎಸ್ ಫೆಡರಲ್ ರಿಸರ್ವ್‌ನ ಇತ್ತೀಚಿನ ನೀತಿ ಸಭೆಯಿಂದ ಹೂಡಿಕೆದಾರರು ಪ್ರಭಾವಿತರಾಗಿದ್ದು, ದರ ಏರಿಕೆಯು ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಅಲುಗಾಡಿಸಬಹುದು ಎಂದು ಆತಂಕಗೊಂಡಿದ್ದಾರೆ.
ಏರುತ್ತಿರುವ ಜಾಗತಿಕ ಹಣದುಬ್ಬರ, ಚೀನಾದಲ್ಲಿ ಲಾಕ್‌ಡೌನ್ ಹಾಗು ಉಕ್ರೇನ್ ಯುದ್ಧದ ನಡುವೆ ಶೇರು ಮಾರುಕಟ್ಟೆಯು ಪಾತಾಳಕ್ಕೆ ಇಳಿದಿದೆ.
ಇದು ದೇಶೀಯ ಮಾರುಕಟ್ಟೆ ಮೇಲೂ ಪ್ರಭಾವ ಬೀರಿದ್ದು, ನಿರಂತರವಾಗಿ ಕುಸಿತ ಕಾಣುತ್ತಿದೆ. ಆರಂಭಿಕವಾಗಿ ಕೊಂಚ ಚೇತರಿಸಿಕೊಂಡರೂ, ವಹಿವಾಟಿನ ಅಂತ್ಯದ ವೇಳೆಗೆ ಕುಸಿಯುತ್ತಿದೆ.
ಪ್ರಮುಖವಾಗಿ ಟೆಕ್ ಮಹೀಂದ್ರಾ ಭಾರೀ ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ಟೆಕ್ ಮಹೀಂದ್ರಾ ಶೇರುಗಳು ಶೇಕಡಾ 3.72 ರಷ್ಟು ಕುಸಿದಿವೆ. ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್ ಮತ್ತು ವಿಪ್ರೋ ಸಹ ಆರಂಭಿಕವಾಗಿ ಹಿಂದುಳಿದಿವೆ.
30 ಶೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟೆಕ್‌ಎಂ, ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್, ವಿಪ್ರೋ, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಎಸ್‌ಬಿಐ, ಟಿಸಿಎಸ್, ಎಚ್‌ಸಿಎಲ್ ಟೆಕ್, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಶೇರುಗಳು ಕುಸಿತ ಕಂಡಿವೆ.
ನಿಫ್ಟಿ ಐಟಿ, ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ನಿಫ್ಟಿ ಫಾರ್ಮಾ ಕ್ರಮವಾಗಿ ಶೇಕಡಾ 3.38, ಶೇಕಡಾ 1.32 ಮತ್ತು ಶೇಕಡಾ 1.16 ರಷ್ಟು ಕುಸಿದಿದೆ. ಏಷ್ಯನ್ ಪೇಂಟ್ಸ್ ನಿಫ್ಟಿಯಲ್ಲಿ ಭಾರೀ ನಷ್ಟವನ್ನು ಕಂಡಿದೆ. ಸ್ಟಾಕ್ ಶೇಕಡಾ 8.03 ರಷ್ಟು ಕುಸಿದು ರೂಪಾಯಿ 2,839 ಕ್ಕೆ ತಲುಪಿದೆ. ಅದಾನಿ ಪೋರ್ಟ್ಸ್, ದಿವಿಸ್ ಲ್ಯಾಬ್ಸ್, ಯುಪಿಎಲ್ ಮತ್ತು ಟೆಕ್ ಮಹೀಂದ್ರಾ ಕೂಡ ಹಿಂದುಳಿದಿವೆ.
ಐಟಿ ಕಂಪನಿಗಳ ಶೇರು ಕುಸಿತ: ಚೇತರಿಕೆ ಕಾಣದ ಇನ್ಫೋಸಿಸ್, ಟಿಸಿಎಸ್, ವಿಪ್ರೋ
Previous Articleಲಡಾಖ್‌ನಲ್ಲಿ ಸೇನಾ ವಾಹನ ನದಿಗುರುಳಿ 7 ಯೋಧರ ಸಾವು
Next Article ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ