ಲಕ್ನೋ(ಉತ್ತರ ಪ್ರದೇಶ): ಇರುವೆಗಳು ಕಚ್ಚಿದ್ದರಿಂದ ಮೂರು ದಿನದ ಹಸುಗೂಸು ಸಾವನ್ನಪ್ಪಿದೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಹಿಳಾ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಈ ಘಟನೆ ನಡೆದಿದೆ.
ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಅಲ್ಲದೇ ವೈದ್ಯರು ನಮ್ಮ ಬಳಿ 6,500 ರೂಪಾಯಿ ಲಂಚ ಪಡೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಲ್ಪಹಾರ್ ತಹಸಿಲ್ ಪ್ರದೇಶದ ಮುಧರಿ ಗ್ರಾಮದ ನಿವಾಸಿ ಸುರೇಂದ್ರ ರೈಕ್ವಾರ್ ಅವರು ಮೇ 30 ರಂದು ಗರ್ಭಿಣಿ ಪತ್ನಿ ಸೀಮಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅವರಿಗೆ ಗಂಡು ಮಗು ಜನಿಸಿತ್ತು. ಆದರೆ ನವಜಾತ ಶಿಶು ಅಸ್ವಸ್ಥಗೊಂಡ ಹಿನ್ನೆಲೆ ವೈದ್ಯರು ವಿಶೇಷ ನವಜಾತ ಶಿಶು ನಿಗಾ ಘಟಕಕ್ಕೆ ದಾಖಲಿಸಿದ್ದರು.