ಮುಜರಾಯಿ ಇಲಾಖೆಯ 25.50 ಲಕ್ಷ ರೂಗಳನ್ನು ಇಲಾಖಾ ಅನುಮತಿ ಇಲ್ಲದೆ ದುರುಪಯೋಗ ಪಡಿಸಿಕೊಂಡ ನಗರಸಭಾ ವಲಯದ ಮುಜರಾಯಿ ಸಹಾಯಕ ಆಯುಕ್ತ ವೆಂಕಟರಮಣ ಗುರುಪ್ರಸಾದ್ ನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮುಜರಾಯಿ ಸಹಾಯಕ ಆಯುಕ್ತ ವೆಂಕಟರಮಣ ಗುರುಪ್ರಸಾದ್ ನನ್ನು ಎರಡು ದಿನಗಳ ಹಿಂದೆ ವಿಧಾನಸೌಧ ಪೊಲೀಸರು ಬಂಧಿಸಿ ನಿನ್ನೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
ಆರೋಪಿಯನ್ನು ಗುರುಪ್ರಸಾದ್ ಗೆ ಏ.27 ರವರಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಆತನನ್ನು ಜೈಲಿಗೆ ಕಳುಹಿಸಲಾಗಿದೆ.
ಮುಜರಾಯಿ ಇಲಾಖೆಯ ರೂ 25.50 ಲಕ್ಷ ಹಣವನ್ನು ಇಲಾಖಾ ಅನುಮತಿ ಇಲ್ಲದೆ ದುರುಪಯೋಗ ಪಡಿಸಿಕೊಂಡಿದರು. ಮುಜರಾಯಿ ಆಯುಕ್ತರು ಹಣ ದುರುಪಯೋಗವನ್ನು ಪರಿಶೀಲಿಸಿ ಬೆಂಗಳೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಿಗೆ ಪ್ರಕರಣ ನೀಡುವಂತೆ ಸೂಚಿಸಿದ್ದು, ಅದರಂತೆ ಮುಜರಾಯಿ ತಹಶೀಲದಾರರಾದ ಅರವಿಂದ ಬಾಬುರವರು ಪ್ರಕರಣವನ್ನು ದಾಖಲಿಸಿದ್ದರು.
ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಐ ಪಿ ಸಿ ಕಲಂ 403, 409ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.