Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶಿವರಾಜ್ ರಿಸಲ್ಟ್ ಬಂದಾಗ ಬಾರ್ ಬೆಂಡಿಂಗ್ ಕೆಲಸ ಮಾಡ್ತಿದ್ದ..!
    ಸುದ್ದಿ

    ಶಿವರಾಜ್ ರಿಸಲ್ಟ್ ಬಂದಾಗ ಬಾರ್ ಬೆಂಡಿಂಗ್ ಕೆಲಸ ಮಾಡ್ತಿದ್ದ..!

    vartha chakraBy vartha chakraJune 20, 2022Updated:June 20, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಗದಗ : ಜಿಲ್ಲೆಯ ರೋಣ ತಾಲೂಕಿನ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜ್ ವಿದ್ಯಾರ್ಥಿ ಶಿವರಾಜ್ ಡಿ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯೆ ಹೆಮ್ಮೆ ಪಡುವಂತೆ ಮಾಡಿದ್ದಾನೆ..

    ಪಿಯುಸಿ ಕಲಾ ವಿಭಾಗದಲ್ಲಿ 600 ಕ್ಕೆ 593 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ Rank ಗಳಿಸಿದಾರೆ.. ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ವಿಷಗಳಲ್ಲಿ ಶಿವರಾಜ್ ನೂರಕ್ಕೆ ನೂರು ಅಂಕ ಪಡೆದಿದ್ದಾನೆ.. ಕನ್ನಡ 98, ಇಂಗ್ಲೀಷ್ 95 ಅಂಕ ಪಡೆದು ಕಲಾ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.

    ರಾಯಚೂರು ಮೂಲದ ಶಿವರಾಜ್ ಪಿಯು ವ್ಯಾಸಾಂಗಕ್ಕೆ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜು ಸೇರಿಕೊಂಡಿದ್ರು.. ಸೋದರ ಮಾವ ಲಿಂಗಪ್ಪ ಸೂಚನೆಯಂತೆ ನೆರೇಗಲ್ ಸೇರಿದ್ದ ಶಿವರಾಜ್ ಶ್ರೆದ್ಧೆಯಿಂದ ಕಲೆಯುತ್ತಿದ್ದಾರೆ. ಲಿಂಗಸಗೂರು ತಾಲೂಕಿನ ಯರಗಟ್ಟ ಗ್ರಾಮದಲ್ಲಿ ತಂದೆ ತಾಯಿ ಕೂಲ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ರೆ ಓದಿನಲ್ಲಿ ಸಾಧನೆ ಮಾಡ್ಬೇಕು ಅನ್ನೋ ಹಂಬಲ ಹೊಂದಿರೋ ಶಿವರಾಜ್ ನೆರೇಗಲ್ ನಲ್ಲಿ ಇದ್ದು ಕಲೆಯುತ್ತಿದ್ದರು..

    ಶಿವರಾಜ್ ಮೂಲ ರಾಯಚೂರು. ಕಾಲೇಜು ಅಭ್ಯಾಸ ಮಾಡ್ತಿದ್ದ ಊರು ನೆರೇಗಲ್.. ಆದ್ರೆ, ಸದ್ಯ ಶಿವರಾಜ್ ಕೂಲಿ ಕೆಲಸಕ್ಕೆ ಅಂತಾ ತುಮಕೂರು ಸೇರಿದ್ದಾರೆ. ಏಳನೇ ಕ್ಲಾಸ್ ಇದ್ದಾಗಿನಿಂದಲೂ ಶಿವರಾಜ್ ದುಡಿದೇ ಕಲೀತಿರೋದಂತೆ. ತಿಂಗಳು ರಜೆಯಲ್ಲಿ ಕೆಲಸ ಮಾಡಿ ಉಳಿದ ಹಣವನ್ನೇ ವಿದ್ಯಾಭ್ಯಾಸಕ್ಕೆ ಶಿವರಾಜ್ ಬಳಸ್ತಾರೆ. ಪಿಯು ರಿಸಲ್ಟ್ ಬರೋ ಹೊತ್ತಿಗೆ ಶಿವರಾಜ್ ಬಾರ್ ಬೆಂಡಿಂಗ್ ಕೆಲಸಕ್ಕೆ ಅಂತಾ ತುಮಕೂರು ತೆರಳಿದ್ರು.

    Rank ಬಂದಿರೋ ವಿಚಾರ ಶಿವರಾಜ್ ಗೆ ಫೋನ್ ಮೂಲಕ ತಿಳಿದಿದೆ.. ಸಹ ಕೆಲಸಗಾರರಿಗೂ ವಿಷ್ಯ ತಿಳಿದಿದೆ, ಸ್ಥಳಕ್ಕೆ ಕೇಕ್ ತರೆಸಿದ್ದ ಗೌಂಡಿ, ಮೇಸ್ತ್ರಿಗಳು ಶಿವರಾಜ್ ಸಾಧನೆಯನ್ನ ಸಂಭ್ರಮಿಸಿದ್ದಾರೆ.‌

    ಐಎಎಸ್ ಪರೀಕ್ಷೆ ಪಾಸ್ ಮಾಡ್ಬೇಕು ಅಂತಾ ಕನಸು ಕಾಣ್ತಿರೋ ಶಿವರಾಜ್ ಈಗಿನಿಂದಲೇ ತಯಾರಿ ನಡೆಸಿದಾರೆ.. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಐವರು ಸಹೋದರರು, ಮೂವರು ಸಹೋದರಿಯರ ಪೈಕಿ ಶಿವರಾಜ್ ಮೂರನೇಯವರು. ಅಣ್ಣ ಗಾರೆ ಕೆಲಸ ಮಾಡಿದ್ರೆ ತಂದೆ ತಾಯಿ ಕೂಲಿ ಮಾಡ್ತಾರೆ.. ಮೂರು ಎಕರೆ ಜಮೀನು ನಂಬ್ಕೊಂಡು ಜೀವನ ನಡೀತಿದೆ.. ಯಾರಿಗೂ ಹೊರೆಯಾಗದೇ ಶಿಕ್ಷಣ ಪಡೆಯಬೇಕು ಅನ್ನೋದು ಶಿವರಾಜ್ ಛಲ.

    Verbattle
    Verbattle
    Verbattle
    education ಕಲೆ
    Share. Facebook Twitter Pinterest LinkedIn Tumblr Email WhatsApp
    Previous Articleಆಲಿಯಾ ಭಟ್ ಸಿನಿಮಾ ದೃಶ್ಯವನ್ನು ಪ್ರಚಾರಕ್ಕೆ ಬಳಸಿಕೊಂಡ ಪಾಕ್ ರೆಸ್ಟೋರೆಂಟ್!
    Next Article ‘777 ಚಾರ್ಲಿ’ ಗೆ ತೆರಿಗೆ ವಿನಾಯಿತಿ!
    vartha chakra
    • Website

    Related Posts

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LeonardReawn on ಭಾರತದ ಜೊತೆ ನಾಟಕ ಮಾಡುತ್ತಿದ್ದಾರಾ ಪುತಿನ್?
    • LeonardReawn on ಡಿಜಿಟಲ್ ಅರೆಸ್ಟ್ ವಂಚಕ ಅರೆಸ್ಟ್.
    • LarryCax on ನಾಲ್ವರಿಗೆ ಒಲಿದ ಅದೃಷ್ಟ !
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.