ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ವರ್ಣಾಕ್ಷರಗಳಲ್ಲಿ ಕೆತ್ತನೆ ಮಾಡಿರುವ ವಿಶೇಷ ಉಡುಗೊರೆ ನೀಡಲು ಆಭರಣ Businessಿಗಳು ಮುಂದೆ ಬಂದಿದ್ದಾರೆ. ‘ಯೋಗ’ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಲಿರುವ ಮೋದಿಗೆ ನವರತ್ನ ಜ್ಯುವೆಲ್ಲರ್ಸ್ ವತಿಯಿಂದ ಸಂಸದ ಪ್ರತಾಪ್ ಸಿಂಹ ಮೂಲಕ ಈ ನೆನಪಿನ ಕಾಣಿಕೆ ನೀಡಲಾಗುವುದು.
ಸ್ವರ್ಣ ಲೇಪಿತ ಅಕ್ಷರದ ಫೋಟೋ
ಸ್ವರ್ಣ ಲೇಪಿತ ಅಕ್ಷರದ ಫೋಟೋಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗು ಪ್ರಧಾನಿ ಭಾವಚಿತ್ರವನ್ನು ಬಂಗಾರದಿಂದ ಕೆತ್ತನೆ ಮಾಡಲಾಗಿದೆ. ಬಂಗಾರ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕವನ್ನ ಅಳವಡಿಕೆ ಮಾಡಲಾಗಿದೆ. ಥಾಯ್ಲೆಂಡ್ನಲ್ಲಿ ಮಾಡಿಸಲಾಗಿರುವ ವಿಶೇಷ ಗಿಫ್ಟ್ ಇದಾಗಿದ್ದು, ಮೈಸೂರಿಗರ ಪರವಾಗಿ ಯೋಗಕ್ಕೆ ಮೈಸೂರನ್ನ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ.