ಚಂಡೀಗಢ(ಪಂಜಾಬ್),ಜೂ.21- ಭ್ರಷ್ಟಾಚಾರ ಪ್ರಕರಣವೊಂದರ ಸಂಬಂಧ ಎಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರನ್ನು ಜಾಗೃತ ದಳ( ವಿಜಿಲೆನ್ಸ್ ಬ್ಯೂರೋ) ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಚಂಡೀಗಢದ ಸೆಕ್ಟರ್ – 17ರಲ್ಲಿ ಪತ್ನಿಯೊಂದಿಗೆ ಶಾಪಿಂಗ್ ಮಾಡುತ್ತಿದ್ದಾಗಲೇ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ಕೋರ್ಟ್ಗೆ ಹಾಜರು:
ಸಂಜಯ್ ಪೊಪ್ಲಿ 2008ರ ಬ್ಯಾಚ್ನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ. ಇಡೀ ಲಂಚ ಹಗರಣದಲ್ಲಿ ಭಾಗಿಯಾಗಿದ್ದ ಸಂಜಯ್ ಪೊಪ್ಲಿ ಅವರ ಸಹಾಯಕ ಕಾರ್ಯದರ್ಶಿ ಸಂದೀಪ್ ವತ್ಸ್ ಅವರನ್ನೂ ಜಲಂಧರ್ನಿಂದ ಬಂಧಿಸಲಾಗಿದೆ. ವಿಜಿಲೆನ್ಸ್ ಬ್ಯೂರೋ ಇವರಿಬ್ಬರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಲಂಚದ ಆರೋಪ:
ಒಳಚರಂಡಿ ಗುತ್ತಿಗೆದಾರರಿಂದ ಲಂಚ ಪಡೆದ ಆರೋಪ ಸಂಜಯ್ ಪೊಪ್ಲಿ ಮೇಲಿದೆ. ನೀರು ಮತ್ತು ಒಳಚರಂಡಿ ಮಂಡಳಿಯ ಸಿಇಒ ಆಗಿ ಸಂಜಯ್ ಪೊಪ್ಲಿ ಕೆಲಸ ಮಾಡುತ್ತಿದ್ದರು. ಅವರು ಲಂಚದ ಬಗ್ಗೆ ಮಾತನಾಡಿರುವ ಧ್ವನಿಮುದ್ರಣವೊಂದು ಹೊರಬಿದ್ದಿತ್ತು. ಆ ಬಳಿಕವೇ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರನ್ನು ಬಂಧಿಸಲಾಗಿದೆ. ಮೊಹಾಲಿ ವಿಜಿಲೆನ್ಸ್ ಬ್ಯೂರೋ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 9, ಭ್ರಷ್ಟಾಚಾರ ಕಾಯ್ದೆಯ ಸೆಕ್ಷನ್ 7, 7 ಎ ಮತ್ತು 120 ಬಿ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಹಾಯವಾಣಿಗೆ ದೂರು:
ಅಧಿಕಾರಿಗೆ ಲಂಚ ನೀಡಿದ ವ್ಯಕ್ತಿ 17 ನಿಮಿಷದ ದೂರಿನ ದಾಖಲಾತಿ ಸಮೇತ ಸಿಎಂ ಸಹಾಯವಾಣಿ ಸಂಖ್ಯೆಗೆ ಜೂ.3ರಂದು ದೂರು ನೀಡಿದ್ದರು. ಈ ದೂರು ಸ್ವೀಕರಿಸಿದ ಅಧಿಕಾರಿಗಳ ತಂಡ ತನಿಖೆ ಆರಂಭಿಸಿ ಕ್ರಮ ಕೈಗೊಂಡಿದೆ.
Previous Articleನವೀನ್ ಕುಟುಂಬಕ್ಕೆ ಮೋದಿ ಸಾಂತ್ವನ
Next Article ತೆಲುಗಿನ ಸ್ಟಾರ್ ನಟನೊಂದಿಗೆ ಪವಿತ್ರಾ ಲೋಕೇಶ್ ವಿವಾಹ?