ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಇಷ್ಟು ದಿನ ಟಾಲಿವುಡ್, ಬಾಲಿವುಡ್ ನಲ್ಲಿ ನಟಿಯಾಗಿ ಮಿಂಚಿದ್ದರು. ಇದೀಗ ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ತಲುಪಿಸುವ ಪ್ಲಂ ಎನ್ನುವ ಕಂಪನಿಯಲ್ಲಿ ರಶ್ಮಿಕಾ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಎಷ್ಟು ಹೂಡಿಕೆ ಮಾಡಿದ್ದಾರೆಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.
ಮಹಾರಾಷ್ಟ್ರ ಮೂಲದ D2C ಸಸ್ಯಾಹಾರಿ ಸ್ಟಾರ್ಟಪ್ ಪ್ಲಮ್ ನಲ್ಲಿ ರಶ್ಮಿಕಾ ಹೂಡಿಕೆ ಮಾಡಿದ್ದಾರೆ
ಕಂಪನಿಯಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಹೆಚ್ಚು ಗ್ರಾಹಕರನ್ನು ಸೆಳೆಯಲು ರಶ್ಮಿಕಾರನ್ನು ಬ್ರಾಂಡ್ ಅಂಬಾಸಿಡರ್ ಆಗಿಯೂ ನೇಮಕ ಮಾಡಲಾಗಿದೆ