ನಡುರಸ್ತೆ ಮೇಲೆ ಸ್ಕೂಟರ್ವೊಂದು ಹೊತ್ತಿ ಉರಿದಿದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ನಡೆದಿದೆ. ನಿನ್ನೆ ಸಂಜೆ ಮೈಸೂರು ಮೂಲದ ಶಿವರಾಮು ಹಾಗೂ ಅನಂತ ರಾಮಯ್ಯ ಎಂಬುವರು ಸ್ಕೂಟರ್ನಲ್ಲಿ ಕೆ.ಆರ್ ಪೇಟೆ ಕಡೆಗೆ ಹೊರಟಿದ್ದಾಗ ಈ ದುರಂತ ಸಂಭವಿಸಿದೆ.
ರಸ್ತೆ ಮಧ್ಯ ಹೊತ್ತಿ ಉರಿದ ಸ್ಕೂಟರ್ ರಸ್ತೆ ಮಧ್ಯೆ ಸ್ಕೂಟರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ಇಬ್ಬರು ಸವಾರರನ್ನು ರಕ್ಷಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವರಾಮು ಎಂಬುವರು ಕಳೆದ ರಾತ್ರಿ ಮೈಸೂರಿನ ಕೆ. ಆರ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇವರಿಬ್ಬರೂ ಮೈಸೂರಿನ ಸಿದ್ದಾರ್ಥ ನಗರದ ನಿವಾಸಿಗಳು ಎನ್ನಲಾಗಿದೆ
Previous Articleಸಚಿವ ಆನಂದಸಿಂಗ್ ಕಚೇರಿಯಲ್ಲಿ ಪುನೀತ್ ರಾಜ್ ಕುಮಾರ್ ಜಾಕೆಟ್!
Next Article ಚಿನ್ನ ಲೂಟಿ..